ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಗಾಂಧಿಮೈದಾನ ಕ್ರೀಡಾಂಗಣದಲ್ಲಿ ಗುಜರಿ ವಸ್ತುಗಳ ತೆರವು

ಬ್ರಹ್ಮಾವರ: ಬ್ರಹ್ಮಾವರ ಗಾಂಧಿಮೈದಾನ ಕ್ರೀಡಾಂಗಣವಾಗಿ ಎಲ್ಲಾ ಕ್ರೀಡೆಗಳಿಗೆ ಅನುಕೂಲವಾಗಲಿದೆ ಎಂದು ಯುವಜನತೆ ಕಂಡ ಕನಸು ಭಗ್ನವಾಗಿ ಮೈದಾನ ಕಾನೂನುಬಾಹಿರ ಚಟುವಟಿಕೆ ಮತ್ತು ಅರ್ಧಕ್ಕೆ ನಿಂತ ಕಾಮಗಾರಿಯ ಗುಜರಿ ಸಾಮಾನು ದಾಸ್ತಾನು ಹೊಂದಿದ ಕುರಿತು 2 ದಿನದ ಹಿಂದೆ ಮಾಡಲಾದ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತು ಮರುದಿನವೇ ಮೈದಾನದಲ್ಲಿ ರಾಶಿ ಇದ್ದ ಗುಜರಿ ಸಾಮಾನು ತೆರವುಗೊಂಡು ಒಂದು ಹಂತದ ಇಂಪ್ಯಾಕ್ಟ್ ದೊರಕಿದೆ.

5.50 ಎಕ್ರೆ ಸರಕಾರಿ ಸ್ಥಳದಲ್ಲಿ ಯಕ್ಷಗಾನ ನಾನಾ ಕ್ರೀಡೆ ಮತ್ತು ತಾಲೂಕು ಆಡಳಿತದಿಂದ ನಡೆಯುವ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ, ಕ್ರೀಡಾ ಆಸಕ್ತರಿಂದ ರಾಜ್ಯ ಮಟ್ಟದ ಹಲವಾರು ಕ್ರೀಡಾ ಆಯೋಜನೆ ಮಾಡಿ ರಾಜ್ಯ ಮಟ್ಟದ ಕ್ರೀಡಾಳುಗಳು ಭಾಗವಹಿಸುತ್ತಿರುವುದರಿಂದ ಸರಕಾರದಿಂದ ಕೋಟಿಗಟ್ಟಲೆ ಹಣ ಮಂಜೂರು ಆಗಿ ಕಾಮಗಾರಿ ಅರ್ಧಕ್ಕೆ ನಿಂತು ಕ್ರಿಕೆಟ್ ಗ್ರೌಂಡ್ ನಲ್ಲಿ ಆಟ ಆಡದ ಸ್ಥಿತಿಯಲ್ಲಿ ಇತ್ತು.

ಮುಂದಿನ ಕಾಮಗಾರಿಗೆ 2 ಕೋಟಿ ಹಣದ ಬೇಡಿಕೆಯನ್ನು ಸರಕಾರದ ಮುಂದೆ ಬೇಡಿಕೆ ವರದಿ ಸಲ್ಲಿಸಿ ಹಣ ಬಂದ ಬಳಿಕ ಕಾಮಗಾರಿ ಪೂರ್ಣಗೊಳಿಸಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಡುಪಿ ಜಿಲ್ಲಾಸಹಾಯಕ ನಿರ್ದೆಶಕಡಾ, ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

12/11/2024 09:13 pm

Cinque Terre

13.98 K

Cinque Terre

0

ಸಂಬಂಧಿತ ಸುದ್ದಿ