ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಪೊಲೀಸರಿಂದ ಹಿಂದೂ ಮುಖಂಡರ ದಮನ ಯತ್ನ"- ಶ್ರೀಕಾಂತ್ ಶೆಟ್ಟಿ ಆರೋಪ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹಿಂದೂ ಮುಖಂಡರನ್ನು ದಮನಿಸಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎಂದು ಹಿಂದೂ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶ್ರೀಕಾಂತ್, ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ ಹಿಂದೂ ಸಂಘಟನೆಗಳ ಮುಖಂಡರನ್ನು ಹುಡುಕಿ ಹುಡುಕಿ ಜಿಲ್ಲಾ ಪೊಲೀಸರು ಸುಮೋಟೋ ಕೇಸ್ ದಾಖಲಿಸುತ್ತಿದ್ದಾರೆ. ಹಿಂದೂ ಮುಖಂಡರನ್ನು ರೌಡಿಗಳ ರೀತಿ ನೋಡಲಾಗುತ್ತಿದೆ.‌

ಮೊನ್ನೆ ಕಾರ್ಕಳದಲ್ಲಿ ದೀಪೋತ್ಸವ ಸಂದರ್ಭ ಹಿಂದೂ ಸಂಘಟನೆ ಮುಖಂಡರು ದೇವಸ್ಥಾನದ ಆವರಣದಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ಕೇಳಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಪೊಲೀಸ್ ಇಲಾಖೆಯು ಹಿಂದೂ ಮುಖಂಡರ ಮೇಲೆ ಸುಮೋಟೋ ಕೇಸ್ ದಾಖಲಿಸಿದೆ. ಈ ಸುಮೋಟೋ ಕೇಸನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Edited By : Vinayak Patil
PublicNext

PublicNext

22/11/2024 03:49 pm

Cinque Terre

17.2 K

Cinque Terre

1

ಸಂಬಂಧಿತ ಸುದ್ದಿ