ಬಂಟ್ವಾಳ: ಮನೆಯ ಮುಂಭಾಗದಲ್ಲಿ 440ಕೆವಿ ವಿದ್ಯುತ್ ತಂತಿ ಅಳವಡಿಕೆ ಕಾರ್ಯಕ್ಕೆ ದಂಪತಿ ಅಡ್ಡಿಪಡಿಸಿದ್ದು, ಪೊಲೀಸ್ ಬಲದಲ್ಲಿ ಕಾಮಗಾರಿ ಮುಂದುವರಿಸಿದ ಪ್ರಸಂಗ ಮಂಗಳೂರು ಹೊರವಲಯದ ಕುಪ್ಪೆಪದವು ಅಗರಿಯಲ್ಲಿ ನಡೆದಿದೆ.
ಕೇರಳಕ್ಕೆ ಹಾದು ಹೋಗುವ 440ಕೆವಿ ವಿದ್ಯುತ್ ತಂತಿ ಕಾಮಗಾರಿ ನಡೆಯುತ್ತಿದ್ದು, ಅಗರಿ ಎಂಬಲ್ಲಿನ ಚಂದಯ್ಯ ಜೋಗಿ ಹಾಗೂ ಇಂದಿರಾ ಜೋಗಿಯವರ ಮನೆಯ ಮುಂಭಾಗವೇ ಈ ವಿದ್ಯುತ್ ಹಾದು ಹೋಗುತ್ತಿದೆ. ಆದ್ದರಿಂದ ಈ ದಂಪತಿ ಕಾಮಗಾರಿ ನಡೆಸಲು ಅಡ್ಡಿ ಪಡಿಸಿದ್ದಾರೆ.
ಆದ್ದರಿಂದ ಸ್ಥಳಕ್ಕೆ ಎಸಿ ಆಗಮಿಸಿ ದಂಪತಿಯ ಮನವೊಲಿಕೆಗೆ ಯತ್ನಿಸಿದ್ದಾರೆ. ಅಲ್ಲದೆ, ಈ ಹಿಂದೆಯೇ ಚಂದಯ್ಯ ಜೋಗಿಯವರು 440 ಕೆವಿ ವಿದ್ಯುತ್ ತಂತಿ ಅಳವಡಿಕೆಗೆ ಸಮ್ಮತಿಸಿ ಸಹಿಯನ್ನೂ ಹಾಕಿದ್ದರು. ಆದರೆ, ಇದೀಗ ಅಪಾಯಕಾರಿ ತಂತಿಯನ್ನು ಅಳವಡಿಸದಂತೆ ತಡೆವೊಡ್ಡಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ಮನೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಆದರೆ, ಸ್ಥಳಕ್ಕೆ ಸಹಾಯಕ ಆಯುಕ್ತರು ಆಗಮಿಸಿ ಪೊಲೀಸರನ್ನು ನಿಯೋಜಿಸಿ ಕಾಮಗಾರಿ ನಡೆಸಲಾಗುತ್ತಿದೆ. ಇದೀಗ ಮನೆಯವರು ತಮಗೆ ಗೊತ್ತಿಲ್ಲದಂತೆ ಚಂದಯ್ಯ ಜೋಗಿಯವರಿಂದ ಸಹಿ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ. ಮುಂದೆ ಪ್ರಾಣಹಾನಿಯಂತಹ ಘಟನೆಗಳು ಸಂಭವಿಸಿದ್ದಲ್ಲಿ ಯಾರು ಹೊಣೆ? ಎಂದು ಅವಲತ್ತುಕೊಳ್ಳುತ್ತಿದ್ದಾರೆ.
PublicNext
22/11/2024 07:45 am