ಕಾರ್ಕಳ : ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಳ್ಳಲು ಗುರುವಾರ ಕಾರ್ಕಳ ಪುರಸಭಾ ಕಾರ್ಯಾಲಯದಲ್ಲಿ ಸಾಲದ ಚೆಕ್ ವಿತರಿಸಲಾಯಿತು.
ಪುರಸಭಾಧ್ಯಕ್ಷ ಯೋಗೇಶ್ ದೇವಾಡಿಗ ಮಾತನಾಡಿ, ದೀನದಯಾಳ್ ಅಂತ್ಯೋದಯ ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣಾ ಘಟಕ ಯೋಜನೆ ಅಡಿ, ಸಂಬಂಧಪಟ್ಟ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಅನುದಾನವನ್ನು ಒದಗಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಉದ್ಯಮ ಘಟಕಗಳನ್ನು ಆರಂಭಿಸಿ ಯಶ್ವಸಿಯಾಗಬೇಕು, ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಸ್ವಾವಲಂಬಿಯಾಗಲು ಸರಕಾರ 13.60 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಸಮರ್ಪಕವಾಗಿ ಸ್ವಾವಲಂಬಿ ಚಟುವಟಿಕೆಗಳಿಗೆ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ 34 ಮಂದಿ ಮಹಿಳಾ ಪಲಾನುಭವಿಗಳಿಗೆ ತಲಾ 40,000 ಸಾವಿರ ರೂಪಾಯಿಯ ಚೆಕ್ ವಿತರಿಸಲಾಯಿತು.
Kshetra Samachara
22/11/2024 11:27 am