ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ ಕಲಶೇಶ್ವರನಿಗೆ ಗಿರಿಜಾ ಕಲ್ಯಾಣೋತ್ಸವ

ಚಿಕ್ಕಮಗಳೂರು: ಮಲೆನಾಡಿನ ಪುಣ್ಯಕ್ಷೇತ್ರ ದಕ್ಷಿಣ ಕಾಶಿ, ಅಗಸ್ತ್ಯ ಕ್ಷೇತ್ರವೆಂದು ಖ್ಯಾತಿ ಪಡೆದಿರುವ, ಕಲ್ಯಾಣ ಕಲಶೇಶ್ವರದ, ಕಲಶೇಶ್ವರ ಸ್ವಾಮಿಗೆ ತಡ ರಾತ್ರಿ 3 ಗಂಟೆಗೆ ಗಿರಿಜಾಂಬೆಯೊಂದಿಗೆ ಕಲ್ಯಾಣ ಭಾಗ್ಯನೆರವೇರಿದೆ.

ಬ್ರಹ್ಮದೇವನ ನಿಶ್ಚಯಿಸಿದಂತೆ ಶಿವನು ಕಲ್ಯಾಣಕ್ಕಾಗಿಯೇ ಕಳಸದಲ್ಲಿ ನೆಲೆ ನಿಂತ ಕಾರಣ ಕಲಶೇಶ್ವರನಿಗೆ ಗಿರಿಜಾ ಕಲ್ಯಾಣವೇ ಶ್ರೇಷ್ಠವಾದ ಉತ್ಸವವಾಗಿದೆ. ಇದು ಕಾರ್ತಿಕ ಶುದ್ಧ ಏಕಾದಶಿಯ ರಾತ್ರಿ ಕನ್ಯಾಲಗ್ನ ಎಂದು ಬ್ರಹ್ಮದೇವನು ನಿಶ್ಚಯಿಸಿರುವುದರಿಂದ ಈಗಲೂ ಅದರಂತೆ ನಡೆಯುತ್ತಿದೆ. ಇಲ್ಲಿ ಕನ್ಯಾ ನಿಶ್ಚಯವಾಗುವುದು ಅಮಾವಾಸ್ಯೆಯ ದಿನ.

ಅಮಾವಾಸ್ಯೆಯ ರಾತ್ರಿ ಶಿವನಿಗೂ ಗಿರಿಜಾಂಬೆಗೂ ಮದುವೆ ನಿಶ್ಚಯ ಗಿರಿಜಾಂಬ ದೇವಾಸ್ಥಾನದಲ್ಲಿ ಆಗುತ್ತದೆ. ಅದರ ಪ್ರಕಾರ ವಿವಿಧ ವಿಧಿವಿಧಾನಗಳು ನಡೆಯುತ್ತವೆ. ಸರ್ವಾಂಗ ಸುಂದರಿಯಾದ ಅಮ್ಮನವರು ಬಳಿ ಬಂದಾಗ ಶಿವನ ಕಡೆಯವರು ದಿಬ್ಬಣವನ್ನು ಎದುರುಗೊಳ್ಳಲಾಗುತ್ತದೆ. ಸಾಂಪ್ರದಾಯಿಕ ವಿಧಿಗಳೊಂದಿಗೆ ಕನ್ಯಾವರಣ ಮಾಡಲಾಗುತ್ತದೆ.

ಶಿವನು ಕಲ್ಯಾಣಕ್ಕಾಗಿಯೇ ಕಳಸದಲ್ಲಿ ನೆಲೆ ನಿಂತ ಕಾರಣ ಕಾಲಶೇಶ್ವರನಿಗೆ ಗಿರಿಜಾ ಕಲ್ಯಾಣವೇ ಶ್ರೇಷ್ಠವಾದ ಉತ್ಸವವಾಗಿದೆ.

Edited By : Suman K
Kshetra Samachara

Kshetra Samachara

13/11/2024 06:07 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ