ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಫೆಂಗಲ್ ಚಂಡಮಾರುತ ಅಬ್ಬರಿಸುತ್ತಿದ್ದು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಸಂಜೆ ಬಳಿಕ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಭಾಗಗಳಲ್ಲಿ ಮಳೆಯ ಅಬ್ಬರ ತುಸು ಜೋರಾಗಿದೆ. ಮಳೆಯ ಪರಿಣಾಮ ಮತ್ತೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಕಟಾವು ಈಗಾಗಲೇ ಆರಂಭಗೊಂಡಿದ್ದು ಕಟಾವಾಗಿರುವ ಬೆಳೆಯನ್ನು ಒಣಗಿಸುವುದು ಹಾಗೂ ಗಿಡದಲ್ಲಿರುವ ಕಾಫಿಯನ್ನು ಕೊಯ್ಲು ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ರೀತಿ ಎರಡು ಮೂರು ದಿನ ಮಳೆ ಮುಂದುವರೆದರೆ ಗಿಡದಲ್ಲಿರುವ ಫಸಲು ನೆಲ ಕಚ್ಚುವ ಭೀತಿ ಎದುರಾಗಿದೆ.
PublicNext
02/12/2024 10:41 pm