ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಸಿಂಹರಾಜಪುರ ಪಟ್ಟಣದ ಸಮೀಪಕ್ಕೆ ಬಂದ ಕಾಡಾನೆ

ನರಸಿಂಹರಾಜಪುರ: ತಾಲೂಕಿನ ಸಿತೂರಿನಲ್ಲಿ ಎರಡು ದಿನಗಳ ಹಿಂದಷ್ಟೇ ಕಾಡಾನೆಯೊಂದು ದಾಳಿ ನಡೆಸಿ ಉಮೇಶ್ ಎಂಬುವವರನ್ನು ಬಲಿ ಪಡೆದಿತ್ತು ಇದರಿಂದ ತಾಲೂಕಿನ ಜನರು ಭಯಭೀತರಾಗಿದ್ದರು.

ಇದರ ಬೆನ್ನಲ್ಲೇ ಭದ್ರಾ ಹಿನ್ನಿರಿನ ಹೊನ್ನೇಕೂಡಿಗೆ ಸಂಪರ್ಕ ಸೇತುವೆ ಬಳಿಯ ರಾವುರು ಬಳಿ ಆನೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ. ಪಟ್ಟಣ ದಿಂದ ಕೇವಲ 5 ಕಿ.ಮೀ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವುದರಿಂದ ಪಟ್ಟಣದ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಭದ್ರಾ ಹಿನ್ನೀರಿನಲ್ಲಿ ಮೀನುಗಾರಿಕೆಯನ್ನು ನಡೆಸದಂತೆ ಪೊಲೀಸರು ಮೀನುಗಾರರಿಗೆ ಸೂಚನೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

02/12/2024 09:36 am

Cinque Terre

700

Cinque Terre

0

ಸಂಬಂಧಿತ ಸುದ್ದಿ