ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಲ್ದೂರಿನಿಂದ ಮಲ್ಲಂದೂರಿನವರೆಗಿನ 66/11 ವಿದ್ಯುತ್ ಕಾಮಗಾರಿಗೆ ಕಾಫಿ ಬೆಳೆಗಾರರಿಂದ ವಿರೋಧ

ಚಿಕ್ಕಮಗಳೂರು: ತಾಲೂಕಿನ ಆಲ್ದೂರಿನ ವಿದ್ಯುತ್ ಉಪಕೇಂದ್ರದಿಂದ ಮಲ್ಲಂದೂರು ವರೆಗಿನ ಉದ್ದೇಶಿತ 66/11 ಕೆ.ವಿ ಕಾಮಗಾರಿ ಹಾದುಹೋಗುವ ಪ್ರದೇಶದ ಕಾಫಿ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯವರು ಪೂರ್ವಭಾವಿ ಸಭೆಯನ್ನು ನಡೆಸಿ ಯಾವುದೇ ಮಾಹಿತಿಯನ್ನು ನೀಡಿಲ್ಲ, ಅಲ್ಲದೇ ಈ ಯೋಜನೆ ಭದ್ರಾ ಮೀಸಲು ಅರಣ್ಯದ ವ್ಯಾಪ್ತಿಗೆ ಬರಲಿದ್ದು ಇದರಿಂದ ಪ್ರಾಣಿ ಪಕ್ಷಿಗಳಿಗೂ ತೊಂದರೆ ಉಂಟಾಗುತ್ತದೆ, ಈಗಾಗಲೇ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಎಕ್ಸ್ ಪ್ರೆಸ್ ವಿದ್ಯುತ್ ಲೈನ್ ಇದ್ದು ಹೊಸ ಕಾಮಗಾರಿ ಅವಶ್ಯಕತೆ ಇರುವುದಿಲ್ಲ ಎಂದು ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಈ ಕಾಮಗಾರಿಯಿಂದ ಯಾರಿಗೆ ಉಪಯೋಗ ಆಗುತ್ತೆ ಎಂಬ ಪ್ರಶ್ನೆಗೆ ಅಧಿಕಾರಿಗಳು ಸರಿಯಾಗಿ ಉತ್ತರ ನೀಡುತ್ತಿಲ್ಲ, ಈ ಕಾಮಗಾರಿ ಆರಂಭಗೊಂಡಲ್ಲಿ 21.68 ಕಿ.ಮೀ ವ್ಯಾಪ್ತಿಯಲ್ಲಿ ಹಲವು ಕಾಡು ಮರಗಳು ಕಾಫಿ, ಮೆಣಸು, ಅಡಿಕೆ ಮರಗಳಿಗೆ ಹಾನಿಯಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಕುರಿತು ರೈತರಿಗೆ, ಬೆಳೆಗಾರರಿಗೆ ಮಾಹಿತಿಯನ್ನು ನೀಡದೆ ಉಪ ವಿಭಾಗಾಧಿಕಾರಿಗಳು ಕಾಮಗಾರಿ ಹಾದು ಹೋಗುವ ಒಂದು ಟವರ್ ಗೆ 40 ಸಾವಿರ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಮೊದಲು ಈ ಕಾಮಗಾರಿಯ ಉಪಯೋಗ ಏನೆಂದು ಹೇಳಲಿ ನಂತರ ಪರಿಹಾರದ ಬಗ್ಗೆ ಮಾತನಾಡಲಿ ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ. ಹೀಗಾಗಿ ಈ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹಾಗೂ ಸ್ಥಳೀಯ ಶಾಸಕರುಗಳನ್ನು ಭೇಟಿ ಮಾಡಿ ಒತ್ತಾಯಿಸುದಾಗಿ ಕಾಫಿ ಬೆಳೆಗಾರರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

01/12/2024 12:30 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ