ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : 23 ಸಾವಿರ ಎಕರೆ ಕಂದಾಯ ಭೂಮಿಯನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸಲು ಸದ್ದಿಲ್ಲದೇ ಪ್ಲಾನ್!

ಚಿಕ್ಕಮಗಳೂರು : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮುಳ್ಳಯ್ಯನಗಿರಿ,ಐ.ಡಿ.ಪೀಠ, ಸೇರಿದಂತೆ ನೂರಾರು ಪ್ರವಾಸಿ ಸ್ಥಳಗಳಿವೆ.

ಇನ್ನೂ ಇದನ್ನು ಋಷಿಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ ಅಂತಾನೂ ಕರೆಯಲಾಗುತ್ತದೆ , ಈ ಅರಣ್ಯ ಪ್ರದೇಶದ ವ್ಯಾಪ್ತಿಯ ಅಲ್ಲಲ್ಲಿ ಊರು, ಕಂದಾಯ ಭೂಮಿ, ತೋಟಗಳಿದ್ದು ಇದರೊಟ್ಟಿಗೆ ಜೊತೆಯಾಗಿರೋ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರಕೃತಿಯ ಸ್ವರ್ಗವನ್ನ ಈಗ ಮೀಸಲು ಅರಣ್ಯ ಮಾಡಲು ಸದ್ದಿಲ್ಲದೇ ಹೊರಟಿರುವ ಆರೋಪ ಕೇಳಿಬಂದಿದೆ.

ಅದು 23 ಸಾವಿರ ಎಕರೆ ಕಂದಾಯ ಭೂಮಿಯನ್ನ ಅರಣ್ಯ ಎಂದು ಘೋಷಣೆ ಮಾಡೋಕೆ ಪ್ಲಾನ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಎನ್.ಜಿ.ಓಗಳ ಕುತಂತ್ರ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸದ್ದಿಲ್ಲದೇ ವರದಿ ತಯಾರಿಸ್ತಾ ಇದೆ, 23 ಸಾವಿರ ಎಕರೆ ಪ್ರದೇಶವೇನಾದ್ರೂ ಅರಣ್ಯ ಅಂತಾ ಘೋಷಣೆಯಾದ್ರೆ, ಅಲ್ಲೆ ವಾಸಿಸುತ್ತಿರುವ ಜನರ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತೇ ಮೀಸಲು ಅರಣ್ಯ ಘೋಷಣೆಯಾದ್ರೆ ಪ್ರವಾಸಿಗರಿಗೂ ನಿರ್ಬಂಧ ಹಾಕುವ ಜೊತೆಗೆ ಕಾಮಗಾರಿಯಂತೂ ನಡೆಯೋದೆ ಇಲ್ಲ, ಹೀಗಾಗಿ ಇದಕ್ಕೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ಹಾಗೂ ಒತ್ತುವರಿ ತೆರವಿನ ನಡುವೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮೀಸಲು ಸಂರಕ್ಷಿತಾರಣ್ಯ ಘೋಷಣೆಯ ಆತಂಕ ಎದುರಾಗಿರುವುದಂತೂ ಸುಳ್ಳಲ್ಲ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Ashok M
PublicNext

PublicNext

02/12/2024 11:59 am

Cinque Terre

17.24 K

Cinque Terre

0

ಸಂಬಂಧಿತ ಸುದ್ದಿ