ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಅಡುಗೆ ಅನಿಲ ಸುರಕ್ಷತಾ ತಪಾಸಣಾ ಅಭಿಯಾನ

ಚಿಕ್ಕಮಗಳೂರು : ಕೇಂದ್ರ ಸರಕಾರದ ಅಧೀನದಲ್ಲಿರುವ ಪ್ರತಿಷ್ಠಿತ ತೈಲ ಮಾರಾಟ ಕಂಪೆನಿಗಳಾದ ಐಒಸಿಎಲ್, ಎಚ್‌ಪಿಸಿಎಲ್ , ಬಿಪಿಸಿಎಲ್ ವತಿಯಿಂದ ಮಾರ್ಚ್ 5ರಿಂದ ನಡೆಸಿದ ಸಾಮಾನ್ಯ ಸುರಕ್ಷತಾ ತಪಾಸಣಾ ಅಭಿಯಾನವು ದೇಶದ 12 ಕೋಟಿ ಮನೆಗಳಿಗೆ ತಲುಪುವ ಉದ್ದೇಶದೊಂದಿಗೆ ಯಶಸ್ವಿಯಾಗಿ ನಡೆದಿದೆ. ಈ ಸುರಕ್ಷತಾ ತಪಾಸಣಾ ಅಭಿಯಾನವನ್ನು ಗ್ರಾಹಕರ ಮನೆಗಳಲ್ಲಿ ಉಚಿತವಾಗಿ ನಡೆಸಲಾಗಿದ್ದು, ಅಭಿಯಾನದ ಮೂಲಕ ಗ್ರಾಹಕರು ಮನೆಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ನೀಡಲಾಯಿತು. ಅಭಿಯಾನದ ಸಂದರ್ಭ ದೇಶಾದ್ಯಂತ 8.ಕೋಟಿ ಗ್ರಾಹಕರ ಅಡುಗೆ ಅನಿಲ ಸಂಪರ್ಕಗಳನ್ನು ತಪಾಸಣೆಗೊಳಪಡಿಸಲಾಗಿದ್ದು, 3.5ಕೋಟಿ ಮನೆಗಳ ಅಡುಗೆ ಅನಿಲ ಸಂಪರ್ಕದ ರಬ್ಬರ್ ಟ್ಯೂಬ್‌ ಗಳನ್ನು ಕಡಿಮೆ ದರದಲ್ಲಿ ಬದಲಾಯಿಸಿ ಕೊಡಲಾಯಿತು.

ಈ ಸುರಕ್ಷತಾ ಅಭಿಯಾನದ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲೂ “ನಮ್ಮ ಅಡುಗೆ ನಮ್ಮ ಜವಾಬ್ದಾರಿ” ಘೋಷ ವಾಕ್ಯದೊಂದಿಗೆ ಅಡುಗೆ ಸ್ಪರ್ಧೆ ನಡೆಸಿದ್ದು, ಈ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್ ಕಂಪನಿಗಳಿಗೆ ಸೇರಿದ ಏಜನ್ಸಿಗಳ ವ್ಯಾಪ್ತಿಯ ಗ್ರಾಹಕರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಒಟ್ಟು 20 ಸ್ಪರ್ಧಾಳುಗಳು ಪಾಲ್ಗೊಂಡಿದ್ದು, ಪ್ರಥಮ ಬಹುಮಾನವನ್ನು ನಯನಾ ಬಿನ್ ರಘು ಕೆಳಗೂರು. ಗೌರಮ್ಮ ಕೋಂ ರಾಮಚಂದ್ರ ನರಗನಹಳ್ಳಿ ಅವರು ದ್ವಿತೀಯ ಬಹುಮಾನ ಹಾಗೂ ಲತಾ ಕೋಂ ಅನಿಲ್ ಕುಮಾರ್ ಭೀಕನಹಳ್ಳಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಹಾಗೂ ಅತಿಥಿಗಳಾಗಿ ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಪ್ರವೀಣ್ ಕೆ.ಎನ್, ಆಹಾರ ನಿರೀಕ್ಷಕ ಶಶಿಕುಮಾರ್ ಎಚ್.ವಿ, ನೀರಾವರಿ ಇಲಾಖೆಯ ಮಂಜುಳಾ ಪಂಡರಾಪುರ ಮತ್ತು ಚಿಕ್ಕಮಗಳೂರು ನಗರದ ಆಫ್ರಿಕಾ ಹೊಟೇಲ್ ನ ಜನರಲ್ ಮ್ಯಾನೇಜರ್ ರಾಮಕೃಷ್ಣ ಅವರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

04/12/2024 12:37 pm

Cinque Terre

1,000

Cinque Terre

0

ಸಂಬಂಧಿತ ಸುದ್ದಿ