ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಅಕ್ರಮ ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಒತ್ತಾಯ

ಚಿಕ್ಕಮಗಳೂರು : ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿಗಳನ್ನು ತೆರವು ಗೊಳಿಸಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಮುಖಂಡರುಗಳು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೆಚ್.ಟಿ.ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಕೆ.ರವಿಕುಮಾರ್ ಸಖರಾಯಪಟ್ಟಣ ಹೋಬಳಿಯ ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಪರಿಣಾಮ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ ಎಂದರು.

ಗ್ರಾಮದಲ್ಲೇ ಮದ್ಯವು ಮುಂಜಾನೆಯಿಂದ ದೊರಕುತ್ತಿರುವ ಕಾರಣ ಕೆಲವರು ಕೆಲಸ ಕಾರ್ಯಗಳನ್ನು ತ್ಯಜಿಸಿ ಪಾನಮತ್ತರಾಗುತ್ತಿದ್ದಾರೆ. ಅಲ್ಲದೇ ದಿನದ ಸಂಪೂರ್ಣ ದುಡಿಮೆಯನ್ನು ಮದ್ಯದ ಅಂಗಡಿ ಸುರಿಯುತ್ತಿದಿರುವ ಕಾರಣ ಕುಟುಂಬದ ಜೀವನ ತೀವ್ರ ದುಸ್ತರವಾಗಿದೆ ಎಂದು ಹೇಳಿದರು.

Edited By : PublicNext Desk
PublicNext

PublicNext

03/12/2024 01:29 pm

Cinque Terre

9.74 K

Cinque Terre

0

ಸಂಬಂಧಿತ ಸುದ್ದಿ