ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಡಾನೆಗಳ ಕಾಟ ಅಧಿವೇಶನದಲ್ಲಿ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ರೈತ ಸಂಘದಿಂದ ಒತ್ತಾಯ

ಚಿಕ್ಕಮಗಳೂರು: ಕಾಡಾನೆಗಳು ನಾಡಿಗೆ ಬರದಂತೆ ಶಾಶ್ವತ ಪರಿಹಾರವನ್ನು ರೂಪಿಸಬೇಕೆಂದು ಹಾಗೂ ಎನ್.ಆರ್ ಪುರ ತಾಲೂಕಿನ ಸೀತೂರಿನಲ್ಲಿ ಎರಡು ದಿನಗಳ ಹಿಂದೆ ಆನೆ ದಾಳಿಗೆ ಜೀವ ಕಳೆದುಕೊಂಡ ಉಮೇಶ್ ರವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿ ಹೋಗಿದ್ದು ಇದಕ್ಕೆ ಶಾಶ್ವತ ಪರಿಹಾರ ರೂಪಿಸುವ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಉಸ್ತುವಾರಿ ಸಚಿವರು ಧ್ವನಿ ಎತ್ತ ಬೇಕು. ಕಾಡಾನೆಗಳು ನಾಡಿಗೆ ಬರದಂತೆ ಹಿಮ್ಮೆಟ್ಟಿಸಲು ಕಾಡಂಚಿನ ಗ್ರಾಮಗಳಲ್ಲಿ ಪರಿಣಿತ ಕಾರ್ಯಪಡೆ ಹಾಗೂ ನೂತನ ತಂತ್ರಜ್ಞಾನ ಬಳಸಿ, ಆನೆಗಳ ದಾಳಿಗೆ ಜೀವ ಹಾನಿಯಾದ ಸಂದರ್ಭದಲ್ಲಿ 15 ಲಕ್ಷದ ಬದಲಾಗಿ 30 ಲಕ್ಷ ಪರಿಹಾರ ನೀಡುವ ನಿಯಮವನ್ನು ಜಾರಿಗೊಳಿಸಬೇಕೆಂದು ಅವರು ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/12/2024 06:10 pm

Cinque Terre

940

Cinque Terre

0

ಸಂಬಂಧಿತ ಸುದ್ದಿ