ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಜಿಲ್ಲೆಯ ಬಿಎಸ್ಎನ್ಎಲ್ ಟವರ್ ಗಳಿಗೆ ಮರುಜೀವ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಒಟ್ಟು 217 ಬಿಎಸ್ಎನ್ಎಲ್ ಟವರ್ ಗಳಿದ್ದು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಟರಿ ಮತ್ತು ಜನರೇಟರ್ ಸಮಸ್ಯೆಗಳಿಂದ ನೆಟ್ವರ್ಕ್ ಕೊರತೆ ಇದ್ದುದರ ಹಿನ್ನೆಲೆ ಕೇಂದ್ರ ದೂರ ಸಂಪರ್ಕ ಇಲಾಖೆಯ ಸಹಕಾರದಿಂದ ಹೊಸದಾಗಿ 51 ಬ್ಯಾಟರಿಗಳು ಮಂಜೂರಾಗಿದ್ದು, ಹೆಚ್ಚುವರಿ 43 ಬ್ಯಾಟರಿ ಮಂಜೂರಾತಿ ಹಂತದಲ್ಲಿದೆ. ಇದರಿಂದ ಎಲ್ಲಾ ಟವರ್‌ಗಳಿಗೂ ಬ್ಯಾಟರಿ ಜೋಡಣೆಯ ಬೇಡಿಕೆ ಪೂರೈಕೆ ಆಗಲಿದೆ. ಹಾಗೂ ಹೊಸದಾಗಿ 28 ಟವರ್ ಗಳು ಮಂಜೂರಾತಿ ಆಗಿದ್ದು ಈ ಪೈಕಿ 18 ಸ್ಥಳಗಳಲ್ಲಿ ಟವರ್ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದಲ್ಲಿದ್ದು, 10 ಸ್ಥಳಗಳಲ್ಲಿ 4ಜಿ ಸೇವೆ ಆರಂಭ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ, ಕೊಳಗಾಮೆ, ಶಿರಗುಳ, ಬೊಗಸೆ, ಬೆರಣಗೋಡು, ಕಡೂರು ತಾಲೂಕಿನ ಹೇಳವರ ಕಾಲೋನಿ, ಶಿವಪುರ, ಎನ್ ಆರ್ ಪುರ ತಾಲೂಕಿನ ಹೆಬ್ಜೆ, ಆರಂಬಳ್ಳಿ, ಸಾರ್ಯ ಮತ್ತು ಮೂಡಿಗೆರೆ ತಾಲೂಕಿನ ಪಟ್ಟಣದೂರಿನಲ್ಲಿ ಈಗಾಗಲೇ ಹೊಸ ಟವರ್ ನಿಂದ 4ಜಿ ಸೇವೆ ಆರಂಭಿಸಲಾಗಿದೆ. ಉಳಿದ ಚಿಕ್ಕಮಗಳೂರಿನ ತಳಿಹಳ್ಳ, ಮೂಡಿಗೆರೆಯ ಹೊಸಹಳ್ಳಿ, ಬಲಿಗೆ, ಹೆಗ್ಗೊಡ್ಲು, ಅಲೆಕಾನ್ ಹೊರಟ್ಟಿ ಮತ್ತು ಹಾಲಗಡಗ ಕಳಸ ತಾಲೂಕಿನ ಬಲಿಗೆ ಮುಂತಾದ ಸ್ಥಳಗಳಲ್ಲಿ ಟವರ್ ನಿರ್ಮಾಣ ಕಾರ್ಯ ಮುಗಿದಿದ್ದು ಸದ್ಯದಲ್ಲೇ 4ಜಿ ಸೇವೆ ಆರಂಭಗೊಳ್ಳಲಿದೆ.

ಅರಣ್ಯ, ಕಂದಾಯ ಮತ್ತು ಪಂಚಾಯತ್ ಇಲಾಖೆಗಳು ಕೂಡಲೇ ಸ್ಪಂದಿಸಿ, ಟವರ್ ಗಳ ನಿರ್ಮಾಣಕ್ಕೆ ಜಾಗವನ್ನು ನೀಡಿದ್ದು, ಟವರ್ ನಿರ್ಮಾಣ ಕಾರ್ಯಕ್ಕೆ ಅನುಕೂಲವಾಗಿದೆ. ಈಗಿರುವ 217 ಟವರ್ ಗಳ ಪೈಕಿ ಚಿಕ್ಕಮಗಳೂರು ತಾಲೂಕಿನ 46, ತರೀಕೆರೆ 12, ಕಡೂರು 18, ಅಜ್ಜಂಪುರ 4, ಮೂಡಿಗೆರೆ 10, ಕಳಸ 4, ಕೊಪ್ಪ 15, ಎನ್ ಆರ್ ಪುರ 11, ಶೃಂಗೇರಿ 10 ಒಟ್ಟು 130 ಟವರ್ ಗಳಲ್ಲಿ 3ಜಿ ಸೇವೆ ಜೊತೆಗೆ 4ಜಿ ಸೇವೆಯನ್ನೂ ಆರಂಭಿಸಲಾಗಿದೆ. ಉಳಿದ 87 ಟವರ್ ಗಳಲ್ಲಿ 4 ಜಿ ಸೇವೆ ಸದ್ಯದಲ್ಲಿ ಕಾರ್ಯರಂಭ ಆಗಲಿದೆ. ಇದಲ್ಲದೆ ಜಿಲ್ಲೆಯಲ್ಲಿ ಬಂದ ಬೇಡಿಕೆಯಂತೆ, 36 ಬಿಎಸ್ಎನ್ಎಲ್ ಹೊಸ ಟವರ್ ಗಳಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

03/12/2024 04:09 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ