ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಹಿರಿನೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲನಹಳ್ಳಿ ಗ್ರಾಮದಲ್ಲಿ ವಾಸಿಸಲು ನಿವೇಶನವಿಲ್ಲವೆಂದು ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ 60ಕ್ಕೂ ಹೆಚ್ಚು ಗುಡಿಸಲುಗಳನ್ನು ತಾಲೂಕು ಆಡಳಿತ ಏಕಾಏಕಿ ನೆಲಸಮ ಮಾಡಿದ್ದ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ಇದೀಗ ಗುಡಿಸಲು ಗಳನ್ನು ತೆರವು ಮಾಡಿ 13 ದಿನ ಕಳೆದರೂ ಯಾವೊಬ್ಬ ಅಧಿಕಾರಿಗಳಾಗಲಿ ಜನ ಪ್ರತಿನಿಧಿಗಳಾಗಲಿ ತಮ್ಮ ಸಮಸ್ಯೆಯನ್ನು ಅಳಿಸಿಲ್ಲ ಎಂದು ಸಂತ್ರಸ್ತರು ನೋವನ್ನು ಹೊರಹಾಕಿದ್ದಾರೆ.
ಅಲ್ಲದೇ ಇದೇ ಸರ್ವೆ ನಂಬರ್ ನಲ್ಲಿ ಪ್ರಭಾವಿಗಳು ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದು ಅವರಿಗೆ ಮಾತ್ರ ರಕ್ಷಣೆ ನೀಡಲಾಗಿದೆ. ನಮ್ಮಂತಹ ಬಡದಲಿತರಿಗೆ ಯಾವ ನ್ಯಾಯವು ಇಲ್ಲದಂತಾಗಿದೆ. ಗುಡಿಸಲು ತೆರವು ಮಾಡುವ ಕುರಿತು ಯಾರೊಬ್ಬರಿಗೂ ನೋಟಿಸ್ ನೀಡಿಲ್ಲ ಏಕಾಏಕಿ ತಾಲೂಕು ಆಡಳಿತದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬಂದು ನಮ್ಮ ಗುಡಿಸಲುಗಳನ್ನು ಸಾಮಾನುಗಳ ಸಮೇತ ನೆಲಸಮ ಮಾಡಿದ್ದಾರೆ. ನಮಗೀಗ ಸೂರು ಇಲ್ಲದಂತಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
PublicNext
29/11/2024 02:45 pm