ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಉಡ ಬೇಟೆಯಾಡುತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಳಿಂಗ ಸರ್ಪಗಳು ಹಾಗೂ ಹೆಬ್ಬಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಳಸ ತಾಲೂಕಿನ ಬಾಲ್ಗಲ್ ಮುಳ್ಳೋಡಿ ಗ್ರಾಮದ ರಾಜಪ್ಪ ಗೌಡ ಎಂಬುವವರು ತಮ್ಮ ತೋಟಕ್ಕೆ ತೆರಳುವಾಗ ದೈತ್ಯ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡುತ್ತಿತು ತಕ್ಷಣ ಎಚ್ಚೆತ್ತ ರಾಜಪ್ಪ ಗೌಡ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಉರಗ ತಜ್ಞ ರಿಜ್ವಾನ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಿಜ್ವಾನ್ ಹಾಗೂ ಅರಣ್ಯ ಸಿಬ್ಬಂದಿಗಳು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಜೊತೆ ಬೇಟೆಯಾಡಿದ್ದ ಉಡವನ್ನು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.

Edited By : Shivu K
PublicNext

PublicNext

30/11/2024 07:45 pm

Cinque Terre

30.73 K

Cinque Terre

0

ಸಂಬಂಧಿತ ಸುದ್ದಿ