ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವರಲ್ಲಿ ಸಮಾಜಮುಖಿ ಚಿಂತನೆಯಿದ್ದರೆ ಮಾತ್ರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯ - ಸಿ.ಟಿ ರವಿ

ಚಿಕ್ಕಮಗಳೂರು: ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಮುಂದೆ ಬಂದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಪಾಂಚಜನ್ಯ ಕಚೇರಿಯಲ್ಲಿ ಜೇ.ಸಿ.ಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇ.ಸಿ.ಐ ಮುಂದಾಗಬೇಕು.

ಮಾನವರಲ್ಲಿ ಸಮಾಜಮುಖಿ ಚಿಂತನೆಯಿದ್ದರೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯ ಎಂದ ಅವರು ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾಗಿದ್ದನನ್ನು ಸಾಮೂಹಿಕವಾಗಿ ಸಂಘಟನೆಯ ಮೂಲಕ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದರು.

Edited By : PublicNext Desk
Kshetra Samachara

Kshetra Samachara

29/11/2024 11:23 am

Cinque Terre

6.14 K

Cinque Terre

0

ಸಂಬಂಧಿತ ಸುದ್ದಿ