ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕನ್ನಡ ಭಾಷೆಯ ಆತ್ಮಾಭಿಮಾನಜೀವಂತವಿಟ್ಟರು ಆಟೋ ಚಾಲಕರು - ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್

ಚಿಕ್ಕಮಗಳೂರು: ರಾಜಧಾನಿಯ ಐ.ಟಿ.-ಬಿ.ಟಿ. ಕಂಪನಿಗಳಲ್ಲಿ ಕನ್ನಡ ಭಾಷೆ ಮರೆ ಯಾಗುತ್ತಿದೆ. ಸ್ನೇಹಿತರು, ಸಂಬಂಧಿಕರ ನಡುವೆಯು ಆಂಗ್ಲಭಾಷೆ ವ್ಯಾಮೋಹ ಹೆಚ್ಚಳಗೊಂಡ ಪರಿಣಾಮ ಮಾತೃಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು

ಮಾಲೀಕರ ಸಂಘದಿಂದ ಏರ್ಪಡಿಸಿದ್ಧ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಿನಾದ್ಯಂತ ಭಾಷೆಯ ಆತ್ಮಾಭಿಮಾನವನ್ನು ಇಂದಿಗೂ ಜೀವಂತ ಇರಿಸಿರುವವರು ಆಟೋ ಚಾಲಕರು. ನೂರಾರು ಪ್ರವಾಸಿಗರು, ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಚಾಲಕರ ಸೇವೆ ಅವಿಸ್ಮರಣೀಯ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

25/11/2024 05:39 pm

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ