ಚಿಕ್ಕಮಗಳೂರು: ಮಾನವ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪೂರೈಸುವ ಸಲುವಾಗಿ ಪ್ರಕೃತಿದತ್ತ ವನಸಿರಿಯನ್ನು ಹಾಳುಗೆಡುವ ಮೂಲಕ ಆರೋಗ್ಯ ಬದುಕಿಗೆ ತಾನಾಗಿಯೇ ಕುತ್ತು ತಂದೊಡುತ್ತಿದ್ದಾನೆ ಎಂದು ಆರ್ ಟಿ ಓ ಅಧಿಕ್ಷಕ ಪ್ರಹ್ಲಾದ್ ಹೇಳಿದರು. ನಗರದ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ವಾಯುಮಾಲಿನ್ಯ ನಿಯಂತ್ರಣ ಕುರಿತು ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರವೂ ಉಳಿಯಬೇಕು. ಜೀವವೂ ಉಳಿಯಬೇಕು. ಹಾಗಾಗಿ
ಚಾಲಕರು ಹೊಗೆರಹಿತ ವಾಹನ ಚಲಾಯಿಸಲು ಮುಂದಾಗಬೇಕು. ಸುಸ್ಥಿತಿಯಲ್ಲಿರುವ ವಾಹನಗಳನ್ನು ಮಾತ್ರ ರಸ್ತೆಗೆ ತರಬೇಕು. ವಾಹನಗಳಿ ಗೆ ಕಲಬೆರಕೆ ಇಂಧನ ಬಳಸದಂತೆ ನಿಗಾವಹಿಸಬೇಕು ಎಂದು ಹೇಳಿದರು. ಮನುಷ್ಯರ ಆರೋಗ್ಯ ಹದಗೆಟ್ಟರೆ ವೈದ್ಯರಲ್ಲಿಗೆ ಹೋಗುತ್ತೇವೆ. ಹಾಗೆಯೇ ವಾಹನಗಳು ಕೆಟ್ಟರೆ ಮೆಕಾನಿಕ್ ಬಳಿಗೆ ಹೋಗಿ ದುರಸ್ಥಿಪಡಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ಎಮಿಷನ್ ಟೆಸ್ಟ್ ಮಾಡಿಸಬೇಕು. ಕಲಬೆರಕೆ ಇಂಧನ
ಅಥವಾ ಎಂಜಿನ್ ಕೆಟ್ಟಿದ್ದರೆ ಹೊಗೆ ಅಧಿಕವಾಗಿ ಪರಿಸರ ಕೆಡುತ್ತದೆ ಎಂದು ಎಚ್ಚರಿಸಿದರು.
Kshetra Samachara
26/11/2024 07:35 pm