ಮೂಡಿಗೆರೆ: ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಆಚರಿಸಲಾಯಿತು. ತಾಲ್ಲೂಕು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಜಯಪ್ರಕಾಶ್.ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು "ಡಾ. ರಾಜೇಂದ್ರ ಪ್ರಸಾದ್ ಅವರ ನೆನಪಿನಲ್ಲಿ ವಕೀಲರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಅಂತಹ ಮಹಾನ್ ಚೇತನಗಳ ಜನ್ಮದಿನಗಳನ್ನು ಆಚರಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿದೆ.
ವಕೀಲರು ಕೇವಲ ನ್ಯಾಯದ ಪಾಲಕರಷ್ಟೇ ಅಲ್ಲ, ಸಾಮಾಜಿಕ ಬದಲಾವಣೆಯ ಪ್ರಮುಖ ಅಂಶವಾಗಿದ್ದಾರೆ ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ್. ಮಾತನಾಡಿ ಡಾ. ಪ್ರಸಾದ್ ಮಹಾನ್ ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಮತ್ತು ಭಾರತದ ಪ್ರಥಮ ರಾಷ್ಟ್ರಪತಿ. ಅವರ ತ್ಯಾಗ ಮತ್ತು ದೇಶಭಕ್ತಿ ನಮ್ಮ ಕಾನೂನು ವ್ಯವಸ್ಥೆಗೆ ಶಾಶ್ವತ ಬೆಳಕಾಗಿದೆ. ನಮ್ಮ ಕೆಲಸವು ಸಮಾಜದ ಬದಲಾವಣೆಗೆ ಮಾರ್ಗದರ್ಶಿಯಾಗಬೇಕು ಎಂದರು.
Kshetra Samachara
04/12/2024 12:27 pm