ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ವಾಮ ಮಾರ್ಗಗಳ ಮೂಲಕ ನೌಕರರ ಚುನಾವಣೆ ನಡೆಸಲು ಕುತಂತ್ರ ನಡೆಯುತ್ತಿದೆ - ಅಭ್ಯರ್ಥಿ ಹೇಮಂತ್

ಚಿಕ್ಕಮಗಳೂರು: ವಾಮ ಮಾರ್ಗಗಳ ಮೂಲಕ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅಕ್ರಮವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಗಂಭೀರವಾಗಿ ಆರೋಪಿಸಿದ್ದಾರೆ. ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಮತ ಪಟ್ಟಿಯಲ್ಲಿ ಹೆಸರುಗಳೇ ಇಲ್ಲದಂತೆ ಮಾಡಿದ್ದಾರೆ.

ಅಲ್ಲದೆ ಚುನಾವಣೆಯ ವೇಳೆ ನಿರ್ದೇಶಕರುಗಳಿಗೆ ಆಮಿಷ, ಬೆದರಿಕೆಯನ್ನು ಒಡ್ಡಿದ್ದು, ಹತಾಶರಾಗಿ ನಮ್ಮ ವಿರುದ್ಧ ಆಣೆ-ಪ್ರಮಾಣ ಹಾಗೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹೇಮಂತ್ ಹಾಗೂ ತಂಡ ದೇವೇಂದ್ರಪ್ಪ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ತಾವು ನಿರ್ಮಿಸಿರುವ ಲೇಔಟ್ ಸೈಟ್ಗಳ ಮಾರಾಟಕ್ಕೆ ಮತ್ತೊಮ್ಮೆ ಅಧ್ಯಕ್ಷರಾಗಲು ಮುಂದಾಗಿದ್ದಾರೆ. ಈ ಹಿಂದೆ ನೌಕರರ ಕ್ಯಾಂಟೀನ್ ನಿರ್ಮಿಸಲು ರಸೀದಿ ನೀಡದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಹೆಸರಿಗೆ ತಕ್ಕಂತೆ ದೇವೇಂದ್ರ ಅವರ ಕುತಂತ್ರ ಹಲವು ನಡೆಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ನೌಕರರ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಇದೆ ವೇಳೆ ಆರೋಪಿಸಿದರು.

Edited By : PublicNext Desk
Kshetra Samachara

Kshetra Samachara

02/12/2024 02:45 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ