ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರಿನ ನಿರ್ವಾಹಕ ಶ್ರೀನಾಥ್ ಎಂಬುವರು ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಮೃತಪಟ್ಟಿದ್ದು, ಇವರ ಸಾವಿಗೆ ಡಿಪೋ ಮ್ಯಾನೇಜರ್ ಬೇಬಿಬಾಯಿ ಹಾಗೂ ಮ್ಯಾಕನಿಕ್ ವಿಭಾಗದ ಮುಖ್ಯಸ್ಥ ಪರಮೇಶ್ವರಪ್ಪ ಅವರ ಕರ್ತವ್ಯ ಲೋಪವೇ ಕಾರಣವಾಗಿದ್ದು ಇಬ್ಬರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ KSRTC ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೇ ದಲಿತ ಪರ ಸಂಘಟನೆಯ ಕಾರ್ಯಕರ್ತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರಿನಿಂದ ಮೈಸೂರು ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊಳೆನರಸೀಪುರ ಸಮೀಪ ಕೆಟ್ಟು ನಿಂತಿದೆ. ಬಸ್ ಕೆಟ್ಟು ನಿಂತಿರುವ ಬಗ್ಗೆ ಬೆಳಿಗ್ಗೆಯೇ ಚಿಕ್ಕಮಗಳೂರು ಡಿಪೋಗೆ ಮಾಹಿತಿ ನೀಡಿದರು ಸಂಜೆ 5 ಗಂಟೆಗೆ ಮ್ಯಾಕನಿಕ್‌ನನ್ನು ಕಳಿಸಲಾಗಿದೆ. ಮ್ಯಾಕನಿಕ್ ಅವರಿಗೆ ಟೂಲ್ಸ್ ತರಲು ಹೇಳಿದ್ದು ಬಸ್‌ನಿಂದ ಕಂಡಕ್ಟರ್ ಇಳಿಯುವಾಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದ್ದು ಕಂಡಕ್ಟರ್ ಶ್ರೀನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಘಟನೆಗೆ ಡಿಪೋ ಮ್ಯಾನೇಜರ್ ಬೇಬಿಬಾಯಿ ಹಾಗೂ ಮ್ಯಾಕನಿಕ್ ವಿಭಾಗದ ಮುಖ್ಯಸ್ಥ ಪರಮೇಶ್ವರಪ್ಪ ನವರೇ ಕಾರಣವಾಗಿದ್ದು ಇಬ್ಬರನ್ನು ಅಮಾನತುಗೊಳಿಸಬೇಕೆಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ
Kshetra Samachara
04/12/2024 05:38 pm