ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದ ನಿವಾಸಿ ಕಮಲ ಎಂಬ 94 ವರ್ಷದ ವೃದ್ದೆ ಆಯಾ ತಪ್ಪಿ ಕಾಲು ಜಾರಿ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದ್ದರು, ಬಾವಿಗೆ ಬೀಳುತ್ತಿದ್ದಂತೆಯೇ ಅಲ್ಲಿದ್ದ ಪೈಪನ್ನು ಹಿಡಿದುಕೊಂಡು ಮುಳುಗದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ವಿಶ್ವನಾಥ್ ನೇತೃತ್ವದ ತಂಡ ಹಗ್ಗದ ಸಹಾಯದಿಂದ ವೃದ್ಧೆಯನ್ನು ಮೇಲಕ್ಕೆತ್ತಿದ್ದಾರೆ, ಇಳಿ ವಯಸ್ಸಿನಲ್ಲೂ ಅಜ್ಜಿಯ ಧೈರ್ಯ ಮತ್ತು ಸಾಹಸ ಮೆಚ್ಚುವಂತ ಸಂಗತಿಯಾಗಿದ್ದು ಕೂನೆಗೆ ಬಡಪಾಯಿ ಜೀವ ಬದುಕುಳಿದಿದೆ. ಇನ್ನೂ ಅಗ್ನಿಶಾಮಕ ದಳದ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ .
PublicNext
03/12/2024 11:09 am