ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು:, ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ - ಕುಟುಂಬಸ್ಥರ ಆಕ್ರೋಶ

ಚಿಕ್ಕಮಗಳೂರು: ಡ್ರೈವರ್ ಗೆ ಊಟ ಕೊಡಲು ಹೋದ ಚಿಕ್ಕಮಗಳೂರಿನ ಕೆಎಸ್ಆರ್ಟಿಸಿ ಕಂಡಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ನಿನ್ನೆ ರಾತ್ರಿ ಚಿಕ್ಕಮಗಳೂರಿನ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೃತದೇಹವಿಟ್ಟು ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಸರ್ಕಾರಿ ಬಸ್ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಕೆಟ್ಟು ನಿಂತಿತ್ತು. ಬೆಳಗ್ಗೆ 9 ಗಂಟೆಗೆ ಬಸ್ ಕೆಟ್ಟು ಹೋಗಿತ್ತು. ಆದರೆ, ಮೆಕ್ಯಾನಿಕ್ ರಾತ್ರಿ 9 ಗಂಟೆಗೆ ಹೋಗಿದ್ದಾನೆ. ಬಸ್ ರಿಪೇರಿಯಾಗುವುದನ್ನು ಡ್ರೈವರ್ ಹಾಗೂ ಕಂಡೆಕ್ಟರ್ ಕಾಯುತ್ತಿದ್ದರು. ಇದೇ ವೇಳೆ ರಾತ್ರಿ ಊಟವನ್ನು ಡ್ರೈವರ್ ಗೆ ಬಸ್ ನ ಕಿಟಕಿಯಿಂದ ನೀಡಲು ಕಂಡೆಕ್ಟರ್ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಂಡೆಕ್ಟರ್ ಶ್ರೀನಾಥ್ (40) ದಾರುಣವಾಗಿ ಸಾವನ್ನಪ್ಪಿದ್ದರು.ಈ ಘಟನೆಯನ್ನು ಖಂಡಿಸಿ ಕಂಡಕ್ಟರ್ ಮೃತದೇಹವನ್ನ ಡಿಪೋದಲ್ಲಿಟ್ಟು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಕಂಡಕ್ಟರ್ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

22/11/2024 12:56 pm

Cinque Terre

26.97 K

Cinque Terre

0

ಸಂಬಂಧಿತ ಸುದ್ದಿ