ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಡಕ್ಟರ್ ಸಾವಿಗೆ ಮೇಲಾಧಿಕಾರಿಗಳೇ ಕಾರಣ ನಾಳೆ ಅಹೋರಾತ್ರಿ ಪ್ರತಿಭಟನೆ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಶ್ರೀನಾಥ್ ಎಂಬುವರು ಮೃತಪಟ್ಟಿದ್ದು, ಇವರ ಸಾವಿಗೆ ಡಿಪೋ ಮ್ಯಾನೇಜರ್ ಬೇಬಿಬಾಯಿ ಹಾಗೂ ಮ್ಯಾಕನಿಕ್ ವಿಭಾಗದ ಮುಖ್ಯಸ್ಥ ಪರಮೇಶ್ವರಪ್ಪ ಅವರ ಕರ್ತವ್ಯ ಲೋಪವೇ ಕಾರಣವಾಗಿದ್ದು ಇಬ್ಬರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಡಿ.4 ರಂದು ನಗರದ ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೇ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದಲಿತ ಸಂಘಟನೆ ಮುಖಂಡ ಮರ್ಲೆ ಅಣ್ಣಯ್ಯ ತಿಳಿಸಿದರು.

ಇತ್ತೀಚೆಗೆ ಮೈಸೂರು ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊಳೆನರಸೀಪುರ ಸಮೀಪ ಕೆಟ್ಟು ನಿಂತಿದೆ. ಬಸ್ ಕೆಟ್ಟು ನಿಂತಿರುವ ಬಗ್ಗೆ ಬೆಳಿಗ್ಗೆಯೇ ಚಿಕ್ಕಮಗಳೂರು ಡಿಪೋಗೆ ಮಾಹಿತಿ ನೀಡಿದರು ಸಂಜೆ 5 ಗಂಟೆಗೆ ಮ್ಯಾಕನಿಕ್‌ನನ್ನು ಕಳಿಸಲಾಗಿದೆ. ಮ್ಯಾಕನಿಕ್ ಅವರಿಗೆ ಟೂಲ್ಸ್ ತರಲು ಹೇಳಿದ್ದು ಬಸ್‌ನಿಂದ ಕಂಡಕ್ಟರ್ ಇಳಿಯುವಾಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದ್ದು ಕಂಡಕ್ಟರ್ ಶ್ರೀನಾಥ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ ಎಂದರು.

ಘಟನೆ ನಡೆದ ಬಳಿಕ ಏಕಾಏಕಿ ಕ್ರೇನ್ ತಗೆದುಕೊಂಡು ಹೋಗಿ ಬಸ್ ತಗೆದುಕೊಂಡು ಹೋಗಲಾಗಿದೆ. ಶವಪರೀಕ್ಷೆಯನ್ನು ವಿಳಂಬ ಮಾಡಲಾಗಿದೆ. 24ಗಂಟೆ ಕಳೆದರೂ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿಲ್ಲ. ಈ ಸಂಬಂಧ ಚಿಕ್ಕಮಗಳೂರು ಡಿಪೋ ಎದುರು ಶ್ರೀನಾಥ್ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದು, ಕರ್ತವ್ಯ ಲೋಪ ಎಸಗಿದ ಡಿಪೋ ಮ್ಯಾನೇಜರ್ ಬೇಬಿಬಾಯಿ ಹಾಗೂ ಮ್ಯಾಕನಿಕ್ ವಿಭಾಗದ ಪರಮೇಶ್ವರಪ್ಪ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿದ್ದು, ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಡಿಸಿಯವರು ಮೇಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

03/12/2024 03:30 pm

Cinque Terre

920

Cinque Terre

0

ಸಂಬಂಧಿತ ಸುದ್ದಿ