ಚಿಕ್ಕಮಗಳೂರು: ಬಾರಿಯ ದತ್ತಾ ಜಯಂತಿ ಡಿಸೆಂಬರ್ 6 ರಿಂದ ಆರಂಭಗೊಳ್ಳಲಿದ್ದು, 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ದತ್ತ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶ್ಯಾಮ್ ವಿ. ಗೌಡ ತಿಳಿಸಿದ್ದಾರೆ. ಈ ಬಾರಿ ಚಿಕ್ಕಮಗಳೂರಿನ ಪ್ರತಿ ಹಿಂದೂಗಳ ಮನೆ, ಕಟ್ಟಡಗಳ ಮೇಲೆ ಕೇಸರಿ ಧ್ವಜವನ್ನು ಹಾರಿಸಿ, ನಗರದ ಎಲ್ಲಾ ವಾರ್ಡ್ಗಳಲ್ಲಿ ದತ್ತ ಜಯಂತಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಡಿಸೆಂಬರ್ 6ರಂದು ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲೆಯನ್ನು ಧರಿಸುವ ಮೂಲಕ ದತ್ತಾ ಜಯಂತಿಗೆ ಚಾಲನೆ ನೀಡಲಾಗುವುದು ಡಿಸೆಂಬರ್ 12ರಂದು ಅನುಸೂಯ ಪೂಜೆ ನಡೆಯಲಿದ್ದು, 13 ರಂದು ನಗರದಲ್ಲಿ ಬೃಹತ್ ಶೋಭಯಾತ್ರೆ ನಡೆಯಲಿದ್ದು ಅಂದಿನ ದಿಕ್ಸೂಚಿ ಭಾಷಣವನ್ನು ಚಕ್ರವರ್ತಿ ಸೂಲಿಬೆಲೆ ಮಾಡಲಿದ್ದಾರೆ. ಡಿಸೆಂಬರ್ 14 ರಂದು ರಾಜ್ಯದೆಲ್ಲೆಡೆಯಿಂದ ಆಗಮಿಸುವ ದತ್ತ ಭಕ್ತರು ದತ್ತಪೀಠದಲ್ಲಿ ಪಾದುಕೆ ದರ್ಶನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
Kshetra Samachara
30/11/2024 01:51 pm