ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶೈಕ್ಷಣಿಕ ಬದುಕಿಗೆ ಗುರು ದಾರಿದೀಪ

ನವಲಗುಂದ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಂಡಾಗ ಮಾತ್ರ ಗುರುವಿನ ಮಾರ್ಗಕ್ಕೆ ಬೆಲೆ. ಗುರು ಶೈಕ್ಷಣಿಕ ಬದುಕಿಗೆ ದಾರಿದೀಪ ಇದ್ದಂತೆ ಎಂದು ನಾಗಲಿಂಗೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೈ.ಬಿ.ಸುರಗಿಹಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 4ರ ಆವರಣದಲ್ಲಿ ಶ್ರೀನಾಗಲಿಂಗೇಶ್ವರ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾವು ನೀಡಿದ ಶಿಕ್ಷಣವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಂಡ ನಮ್ಮ ಎಲ್ಲ ವಿದ್ಯಾರ್ಥಿ ಬಳಗವನ್ನು ನಾನು ಎಂದಿಗೂ ಮರೆಯುವುದಿಲ್ಲ. ನೀವು ನಮ್ಮನ್ನು ಇಲ್ಲಿ ಸ್ಮರಿಸಿ ಗೌರವ ನೀಡಿ ಸನ್ಮಾನಿಸಿದ್ದು ಸಂತಸವಾಗಿದೆ ಎಂದರು.

ನಂತರ ನಿಧನರಾದ ಶಿಕ್ಷಕರಿಗೆ, ಸಹಪಾಠಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ನಾಗಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ವೇಳೆ ನಿವೃತ್ತ ಶಿಕ್ಷಕರಾದ ಬಿ.ಬಿ. ಹೊನ್ನಕುದರಿ, ಎನ್.ಎನ್. ಹಾಲಿಗೇರಿ, ಶಾಲೆ ಗುರುಗಳಾದ ಆರ್. ಕೆ.ಲಂಬಾಣಿ, ಜಿ.ಎಸ್. ಶಿರೂರ, ಎಸ್.ಎಂ. ಕಿರೇಸೂರ, ಪಿ.ಎಸ್.ಹಲಗಿ, ಆರ್.ವೈ.ವಡ್ಡರ, ಮಹದೇವಪ್ಪ ಮಾಳವಾಡ, ರಿಯಾಜ ನಾಶಿಪುಡಿ ಸೇರಿದಂತೆ ಹಲವರಿದ್ದರು.

Edited By : PublicNext Desk
Kshetra Samachara

Kshetra Samachara

13/11/2024 02:51 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ