ಕುಂದಗೋಳ : ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ (NADCP) ಕಾರ್ಯಕ್ರಮದ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಕುಂದಗೋಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಆಸ್ಪತ್ರೆ ಪ್ರಸ್ತುತ ಶೇ.91% ಪ್ರತಿಶತ ಸಾಧನೆ ಮಾಡಿದೆ.
ಜಾನುವಾರುಗಳ ರೋಗ ಮುಂಜಾಗೃತಾ ಕ್ರಮವಾಗಿ ಸರ್ಕಾರ ಜಾರಿಗೆ ತಂದ ಲಸಿಕಾ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಎಲ್ಲೇಡೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಹೆಚ್.ಸಿ.ಪಾಟೀಲ್ ನೇತೃತ್ವದಲ್ಲಿ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 18898 ಜಾನುವಾರುಗಳಿಗೆ ಲಸಿಕೆ ನೀಡಿದ್ದಾರೆ.
ಅಕ್ಟೋಬರ್ 21 ರಿಂದ ಆರಂಭವಾದ ಲಸಿಕಾ ಕಾರ್ಯಕ್ರಮವು ನವೆಂಬರ್ 20 ರಂದು ಕೊನೆಗೊಳ್ಳಲಿದ್ದು, ಈ ನಡುವೆ ವೈದ್ಯರು ಕೈಗೊಂಡ ಕರ್ತವ್ಯದ ವಿವರ ಇಲ್ಲಿದೆ.
ಇನ್ನೂ ಕುಂದಗೋಳ ತಾಲೂಕಿನ 7976 ರೈತಾಪಿ ಜನರ 23314 ಜಾನುವಾರುಗಳನ್ನು ಹೊಂದಿದ್ದಾರೆ, ಈ ರೈತರು ಯಾಕೆ ಲಸಿಕೆ ಹಾಕಿಸಬೇಕು ? ಅದರಿಂದಾಗುವ ಪ್ರಯೋಜನ ಏನು ? ಎಂಬುದರ ವೈದ್ಯರ ಸಲಹೆ ಹೀಗಿದೆ.
ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಎನ್.ಎ.ಡಿ.ಸಿ.ಪಿ ಕಾರ್ಯಕ್ರಮದಲ್ಲಿ ಕುಂದಗೋಳ ಪಶು ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯದ ಮೂಲಕ ರೈತರ ಪ್ರಸಂಶೆಗೆ ಪಾತ್ರರಾಗಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
05/11/2024 05:12 pm