ನವಲಗುಂದ : ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಲವಾಡ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಾಲವಾಡ ಗ್ರಾಮದ ರೈತ ಗರ್ಜಪ್ಪ ನರಸಪ್ಪ ಸಾಲಮನಿ(51) ಈತನು ಕೃಷಿ ಚಟುವಟಿಕೆಗಾಗಿ ಆರೇಕುರಹಟ್ಟಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನಲ್ಲಿ 50 ಸಾವಿರ, ಕಾಲವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 45 ಸಾವಿರ ಮತ್ತು ಹೈನುಗಾರಿಕೆಗಾಗಿ ಹುಬ್ಬಳ್ಳಿಯ ಐಡಿಎಫ್‌ಸಿ ಬ್ಯಾಂಕಿನಲ್ಲಿ 4 ಲಕ್ಷ ಸಾಲ ಮಾಡಿದ್ದನು. ಇದರ ಪೈಕಿ ಕಂತುಗಳನ್ನು ಕಟ್ಟಿ 2,80,000/- ಸಾಲವನ್ನು ತುಂಬುವ ಬಗ್ಗೆ ಮಾನಸಿಕ ಮಾಡಿಕೊಂಡು ತನ್ನ ಧನದ ಹೊಟ್ಟಿನ ಶೆಡ್ಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ಪತ್ನಿ ಸುಮಿತ್ರಾ ಗರ್ಜಪ್ಪ ಸಾಲಮನಿ ಇವರ ಸಾವಿನಲ್ಲಿ ಸಂಶಯ ಹಾಗೂ ದೂರು ಇಲ್ಲವೆಂದು ವರದಿಯಲ್ಲಿ ಸಲ್ಲಿಸಿದ್ದಾಳೆ. ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಪ್ರಕರಣವನ್ನು ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸಐ ಎಸ್.ಜಿ.ಆಲದಕಟ್ಟಿ, ಸಿಪಿಐ ರವಿಕುಮಾರ ಕಪ್ಪತನವರ, ಎಎಸ್‌ಐ ತಾಡಪತ್ರಿ ಭೆಟಿ ನೀಡಿದ್ದಾರೆ. ಇನ್ನು ಇದೇ ವೇಳೆ ನವಲಗುಂದ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ತರಲಾಗಿತ್ತು. ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Kshetra Samachara
06/11/2024 10:53 am