ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಷಮೆ ಕೇಳು ಅಥವಾ 5 ಕೋಟಿ ಹಣ ಕೊಡು ಬಿಷ್ಣೋಯ್‌ ಗ್ಯಾಂಗ್‌ ನಿಂದ ಸಲ್ಮಾನ್‌ ಗೆ ಮತ್ತೊಂದು ಬೆದರಿಕೆ

ಸಲ್ಮಾನ್‌ ಖಾನ್‌ ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೊಂದು ಜೀವ ಬೆದರಿಕೆ ಬಂದಿದೆ. ಇದು ಒಂದೇ ವಾರದಲ್ಲಿ ಸಲ್ಮಾನ್ ಖಾನ್ ಗೆ ಬಂದಿರುವ ಎರಡನೇ ಬೆದರಿಕೆಯ ಮೆಸೇಜ್. ಮೊದಲನೇ ಮೆಸೇಜ್‌ ಕಳೆದ ವಾರ, ಅಕ್ಟೋಬರ್ 30 ರಂದು ಬಂದಿತ್ತು, ಈ ಬಾರಿ ಕೂಡ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಸೋಮವಾರ ರಾತ್ರಿ ವಾಟ್ಸಾಪ್ ‌ ಮೂಲಕ ಈ ಸಂದೇಶವನ್ನು ಬಿಷ್ಣೋಯ್‌ ಗ್ಯಾಂಗ್‌ ರವಾನಿಸಿದೆ.ನಟನಿಗೆ ಎರಡು ಆಯ್ಕೆಗಳನ್ನು ಕೊಡುತ್ತೇವೆ,ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಅಥವಾ ₹ 5 ಕೋಟಿ ಪಾವತಿಸಿ ಎಂದು ಸಲ್ಮಾನ್‌ ಗೆ ಆಪ್ಷನ್‌ ಕೊಟ್ಟಿದ್ದಾರೆ ಬಿಷ್ಣೋಯ್ ಗ್ಯಾಂಗ್. ಸಂದೇಶದಲ್ಲಿ ನಾನು ಲಾರೆನ್ಸ್‌ ಸಹೋದರ ಎಂದು ಬರೆಯಲಾಗಿದೆ.

ಸಲ್ಮಾನ್‌ ಮೇಲೆ ಬಿಷ್ಣೋಯ್‌ ಗ್ಯಾಂಗ್‌ ಗೆ ಯಾಕಿಷ್ಟು ಕೋಪ? ಕಾರಣ ಈ ಹಿಂದೆ, ಬಾಲಿವುಡ್ ಚಲನಚಿತ್ರ ಹಮ್ ಸಾಥ್ ಸಾಥ್ ಹೇ ಚಿತ್ರೀಕರಣದ ಸಮಯದಲ್ಲಿ ರಾಜಸ್ಥಾನದಲ್ಲಿ ಸಲ್ಮಾನ್‌ ಕೃಷ್ಣಮೃಗ ಬೇಟೆಯಾಡಿದ್ದರು.ಕೃಷ್ಣ ಮೃಗ ಬಿಷ್ಣೋಯ್‌ ಸಮುದಾಯಕ್ಕೆ ಪವಿತ್ರವಾದಂತಹ ಪ್ರಾಣಿ, ಇವುಗಳ ಜೊತೆ ಧಾರ್ಮಿಕ ಸಂಬಂಧಕ್ಕಿಂತ ಹೆಚ್ಚಾಗಿ ದೈನಂದಿನ ಬದುಕಿನಲ್ಲಿ ಅವುಗಳನ್ನು ಕಾಪಾಡುವುದು,ಪ್ರಕೃತಿಯನ್ನು ರಕ್ಷಿಸುವುದು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ. ಸಲ್ಮಾನ್‌ ಭೇಟಿಯಾಡಿ ಬಿಷ್ಣೋಯ್‌ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Edited By : Somashekar
PublicNext

PublicNext

05/11/2024 07:23 pm

Cinque Terre

74.85 K

Cinque Terre

5

ಸಂಬಂಧಿತ ಸುದ್ದಿ