ಸಮಂತಾ ರುತ್ ಪ್ರಭು ಸದ್ಯ ಸಿಟಾಡೆಲ್ ಹನಿಬನಿ ಪ್ರಚಾರದಲ್ಲಿದ್ದು,ಇನ್ಸ್ಟಾ ಗ್ರಾಂ ನಲ್ಲಿ ತನ್ನ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಶನ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬರು ಬಾಡಿ ಶೇಮಿಂಗ್ ಮಾಡಿ ಸ್ವಲ್ಪ ವೈಟ್ ಜಾಸ್ತಿ ಮಾಡುವಂತೆ ಸಜೆಸ್ಟ್ ಮಾಡಿದ್ದರು. ಇದಕ್ಕೆ ಸ್ಯಾಮ್ ವೀಡಿಯೊ ಸಂದೇಶದೊಂದಿಗೆ ಉತ್ತರ ಕೊಟ್ಟಿದ್ದಾರೆ." ನನ್ನ ಆರೋಗ್ಯಕ್ಕೆ ಬೇಕಾಗಿರುವ anti-inflammatory diet ನಲ್ಲಿದ್ದು ಅದು ನನ್ನ ತೂಕವನ್ನು ಹೆಚ್ಚಿಸದಂತೆ ತಡೆಯುತ್ತದೆ.ಮಯೋಸಿಟಿಸ್ ಖಾಯಿಲೆ ನಿಯಂತ್ರಿಸಲು ಸಹಾಯ ಮಾಡುತ್ತದೆ,ಸುಖಾ ಸುಮ್ಮನೆ ಜನರನ್ನ ಜಡ್ಜ್ ಮಾಡಬೇಡಿ ಎಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಸಮಂತಾ ಅವರಿಗೆ ಮಯೋಸಿಟಿಸ್ ಎಂಬ ಗಂಭೀರ ಖಾಯಿಲೆಗೆ ತುತ್ತಾಗಿದ್ದು,ಇದರಿಂದ ರೋಗಿಯ ಸ್ನಾಯುಗಳು ತನ್ನದೇ ಇಮ್ಯೂನ್ ಸಿಸ್ಟಮ್ ನಿಂದ ದಾಳಿ ಒಳಗಾಗುತ್ತದೆ. ಇದು ಸ್ನಾಯುಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ, ದಿನ ನಿತ್ಯದ ಚಟುವಟಿಕೆ ಮಾಡಲು ಕಷ್ಟವಾಗುತ್ತದೆ ಹಾಗಾಗಿ ಸ್ಯಾಮ್ ಹೈದರಾಬಾದ್ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
PublicNext
05/11/2024 07:40 pm