ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಾ ರಾಣಿ ಕಾರ್ಯಕ್ರಮದ ನಂತರ ಜಯಶ್ರೀ ಮತ್ತು ಸ್ಟೀವನ್ ಸಂಬಂಧದಲ್ಲಿ ಬಿರುಕು!

ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ 1ರ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಜಯಶ್ರೀ ಆರಾಧ್ಯ ವೈಯಕ್ತಿಕ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ಜಯಶ್ರೀ ಆರಾಧ್ಯ ಮತ್ತು ಸ್ಟೀವನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ರಾಜಾ ರಾಣಿ ಕಾರ್ಯಕ್ರಮದ ಮೂಲಕ ಜಯಶ್ರೀ ಮತ್ತು ಸ್ಟೀವನ್ ಸಂಬಂಧವನ್ನು ಬಹಿರಂಗ ಪಡಿಸಿದ್ದರು. ಕನ್ನಡಿಗರಲ್ಲಿ ಈ ಲಿವ್‌ ಇನ್‌ ಸಂಬಂಧ ಕಡಿಮೆ ಇರುವ ಕಾರಣ ಆರಂಭದಲ್ಲಿ ಒಪ್ಪಿಕೊಳ್ಳಲು ಜನರು ಕೊಂಚ ಕಷ್ಟ ಪಟ್ಟರು ಆದರೆ ಇವರಿಬ್ಬರ ಅನ್ಯೋನ್ಯತೆಯನ್ನು ಮೆಚ್ಚಿಕೊಂಡರು. ಆದರೆ ಈಗ ಬ್ರೇಕಪ್ ಗಾಸಿಪ್ ಎದಿದೆ.

ಕೆಲವು ದಿನಗಳಿಂದೆ ಜಯಶ್ರೀ ಮತ್ತು ಸ್ಟೀವನ್ ಬ್ರೇಕಪ್ ಮಾಡಿಕೊಂಡಿದ್ದಾರೆ, ಒಟ್ಟಿಗೆ ಇಲ್ಲ ಎಂದು ಮಾತನಾಡುತ್ತಿದ್ದಾರೆ. ಅಲ್ಲದೆ ಇಬ್ಬರು ಒಟ್ಟಿಗೆ ಸೇರಿಕೊಂಡು ಬ್ಯುಸಿನೆಸ್‌ ಮಾಡುತ್ತಿದ್ದರು ಈಗ ನಷ್ಟ ಕಂಡಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಸ್ವತಃ ಜಯಶ್ರೀ ಇನ್‌ಸ್ಟಾಗ್ರಾಂನಲ್ಲಿ ನಾನು ಒಬ್ಬಳೇ ಇಲ್ಲ ನಿಮ್ಮೆಲ್ಲರ ಪ್ರೀತಿ ನನ್ನ ಜೊತೆ ಇದೆ, ತುಂಬ ಖುಷಿ ಕೊಡ್ತಿದೆ. ನಿಮ್ಮ ಎಲ್ಲರ ಪ್ರೀತಿಗೆ ಧನ್ಯವಾದಗಳು ಪೋಸ್ಟ್‌ ಹಾಕುವ ಮೂಲಕ ಹ್ಯಾಪಿಯಾಗಿದೆನೆಂದು ಸ್ಪಷ್ಟನೆ ನೀಡಿದ್ದಾರೆ.

Edited By : Suman K
PublicNext

PublicNext

05/11/2024 07:21 pm

Cinque Terre

21.95 K

Cinque Terre

1