ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮೈಸೂರು ಲೋಕಾಯುಕ್ತ ನವೆಂಬರ್ 6 ಅಂದ್ರೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇನ್ನೊಂದು ಕಡೆ ಸಿಎಂ ಅಧಿಕೃತ ಪ್ರವಾಸ ನಿಗದಿಯಾಗಿರುವ ಪ್ರಕಾರ ನಾಳೆ ಸಿಎಂ ಸಿದ್ದರಾಮಯ್ಯ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳಬೇಕಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೋ ಅಥವಾ ಮೈಸೂರು ಲೋಕಾಯುಕ್ತ ಕರೆದಿರುವ ವಿಚಾರಣೆಗೆ ಹಾಜರಾಗ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ನೋಟಿಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರತಿಕ್ರಿಯಿಸಿದ್ದು ಲೋಕಾಯುಕ್ತ ನೋಟಿಸ್ ಬಂದಿದೆ ನಾನು ವಿಚಾರಣೆ ಎದುರಿಸುತ್ತೇನೆ ಎಂದಿದ್ದಾರೆ. ಆದ್ರೆ ಮೂಲಗಳ ಪ್ರಕಾರ ನಾಳೆ ಪೂರ್ವ ನಿಗದಿ ಕಾರ್ಯಕ್ರಮ ನಿಮಿತ್ತ ವಿಚಾರಣೆಗೆ ಸಿಎಂ ಹಾಜರಾಗೋ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಮತ್ತು ಸಿಪಿ ಯೋಗೇಶ್ವರ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಅಲ್ಲಿ ತುಂಬಾ ಅವಶ್ಯಕತೆ ಇದೆ ಎನ್ನುತ್ತದೆ ಪಕ್ಷದ ಮೂಲಗಳು. ಕುಮಾರಸ್ವಾಮಿ ಪುತ್ರನ ಸೋಲಿಸಲು ಸಿದ್ದರಾಮಯ್ಯ ಪ್ರಚಾರ ಮಾಡಲೇಬೇಕಿದೆ ಇಂದು ದೇವೆಗೌಡರು ಸಹ ನಿಖಿಲ್ ಪರ ಪ್ರಚಾರ ಮಾಡ್ತಿದ್ದಾರೆ ನೀವು ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡಲೇಬೇಕು ಎಂದು ಸಿಪಿ ಯೋಗೇಶ್ವರ್ ಒತ್ತಾಯಿಸಿದ್ದಾರೆ.
ಆದ್ರೆ ಚುನಾವಣಾ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ತಲೆಬಿಸಿಯಾಗ್ತಿದೆ ಈಗ ಚುನಾವಣಾ ಪ್ರಚಾರಕ್ಕೆ ತೆರಳಬೇಕೋ ಅಥವಾ ವಿಚಾರಣೆ ಹಾಜರಾಗಬೇಕೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.
PublicNext
05/11/2024 12:02 pm