ಕುಂದಗೋಳ : ಕಾಲು ಮತ್ತು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಶೇ.50% 6ನೇ ಸುತ್ತಿನ ಸಾಧನೆಯಾಗಿದೆ, ಅದರಲ್ಲೂ ಕುಂದಗೋಳ ತಾಲೂಕು ಶೇ.91% ಪ್ರತಿಶತ ಸಾಧನೆ ಮಾಡಿ ಮುಂದಿದೆ ಎಂದು ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ಆರ್.ಡಿ.ಪಾಟೀಲ್ ಹೇಳಿದರು.
ಅವರು ಕುಂದಗೋಳ ಪಶು ಆಸ್ಪತ್ರೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಉದ್ದೇಶಿಸಿ ಮಾತನಾಡಿ ಇಂದು ಕುಂದಗೋಳ ತಾಲೂಕಿನ ಶಿರೂರು ಗ್ರಾಮಕ್ಕೆ ಲಸಿಕೆ ಕಾರ್ಯಕ್ರಮ ಪರಿಶೀಲನೆ ನಡೆಸಿ ಮಾತನಾಡಿ ಶಿರೂರುನಲ್ಲಿ ಒಟ್ಟು 548 ಜಾನುವಾರುಗಳಿದ್ದು, ಅವುಗಳಲ್ಲಿ 516 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದರು.
ಕೋಲ್ಡ್ ಚೈನ್ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಪಶು ಆಸ್ಪತ್ರೆ ವೈದ್ಯರು ಸಿಬ್ಬಂದಿಗಳು ಹೊರಟಿದ್ದಾರೆ, ಕುಂದಗೋಳ ತಾಲೂಕಿನ ರೈತಾಪಿ ಜನರು ಸಹ ಲಸಿಕಾ ಕಾರ್ಯಕ್ರಮದಲ್ಲಿ ಒಳ್ಳೆಯ ಸಹಕಾರ ನೀಡಿದ್ದಾರೆ ಎಂದರು.
Kshetra Samachara
05/11/2024 05:55 pm