ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಹತ್ತಿ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಕೋನರಡ್ಡಿ

ಅಣ್ಣಿಗೇರಿ: ಭಾರತೀಯ ಹತ್ತಿ ನಿಗಮದಿಂದ 2024-25ನೇ ‌ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್‌ ಎ ಕ್ಯೂ ಗುಣಮಟ್ಟದ ಹತ್ತಿ ಉತ್ಪನ್ನ ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬುಧವಾರ ಪಟ್ಟಣದ ಶ್ರೀ ವೀರಭದ್ರೇಶ್ವರ ಕಾಟನ್ ಜಿನಿಂಗ ಫ್ಯಾಕ್ಟರಿಯಲ್ಲಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಹತ್ತಿ ಖರೀದಿ ಕೇಂದ್ರ ಉದ್ಘಾಟನೆ ಮಾಡಿದರು.

ಈ ವೇಳೆ ಶಾಸಕ ಕೋನರಡ್ಡಿ ಮಾತನಾಡಿ ಎಫ್‌ಎ ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್‌ಗೆ ₹7,521 ಗಳಂತೆ (ಶೇಕಡ 8ರಷ್ಟು ತೇವಾಂಶದ ಹತ್ತಿ) ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು ಇದರ ಉಪಯೋಗವನ್ನು ರೈತರು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಹತ್ತಿ ನಿಗಮದ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಸೇರಿದಂತೆ ಶ್ರೀ ವೀರಭದ್ರೇಶ್ವರ ಕಾಟನ್ ಜಿನಿಗ್ ಫ್ಯಾಕ್ಟರಿ ಮಾಲೀಕರು ಹಾಗೂ ರೈತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/11/2024 02:42 pm

Cinque Terre

10.6 K

Cinque Terre

0

ಸಂಬಂಧಿತ ಸುದ್ದಿ