ಕುಂದಗೋಳ : ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಯನ್ನು ದಾಖಲಿಸಿದ ಕಾರಣಕ್ಕೆ ಇಲ್ಲೊಂದು ಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆ ಇದೀಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಹೌದು ! ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಣ ಕ್ಷೇತ್ರದ ಪಾಠ ಬೋಧನೆ ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾದ ವಾತಾವರಣವನ್ನು ಒಳಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ನೀಡುವ "ಅತ್ಯುತ್ತಮ ಜಿಲ್ಲಾ ಮಟ್ಟದ ಶಾಲೆ" ಎಂಬ ಪ್ರಶಂಸೆ ಪಡೆದಿದೆ.
ಮುಖ್ಯವಾಗಿ 1 ರಿಂದ 5 ನೇ ತರಗತಿ 60 ವಿದ್ಯಾರ್ಥಿಗಳನ್ನು ಒಳಗೊಂಡ ಚಿಗರಿ ಬಸ್ಸಿನಂತೆ ಕಾಣುವ ಶಾಲೆ ಸ್ಮಾರ್ಟ್ ಬೋರ್ಡ್, ಸಿಸಿ ಕ್ಯಾಮೆರಾ, ಕಂಪ್ಯೂಟರ್, ಇತರೆ ಡಿಜಿಟಲ್ ಶೈಕ್ಷಣಿಕ ಸಾಮಗ್ರಿ ಒಳಗೊಂಡು ಇದೀಗ ಜಿಲ್ಲಾ ಮಟ್ಟದಲ್ಲೇ ಈ ಸಾಧನೆ ಮಾಡಿದೆ.
ಉತ್ತಮ ಪಾಠ, ಬೋಧನೆ ಆಟೋಟ ಶೈಕ್ಷಣಿಕವಾಗಿ ಮಕ್ಕಳ ಸಾಧನೆ ಸಹ ಮಾನದಂಡವಾಗಿ ಇದೀಗ ಅಲ್ಲಾಪೂರ ಶಾಲೆ ಏಳ್ಗೆ ಶಿಕ್ಷಕರಿಗೂ ಖುಷಿ ತಂದಿದೆ.
ರಾಷ್ಟ್ರದ ಸಂಕೇತ ಸಾರುವ ಚಿತ್ರಗಳನ್ನು ತನ್ನ ಕಾಂಪೌಂಡ್ ಗೋಡೆ ಮೇಲೆ ಒಳಗೊಂಡ ಅಲ್ಲಾಪೂರ ಶಾಲೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಸಿಕ್ಕಿರುವ ಕಾರಣ ಗ್ರಾಮಸ್ಥರು ಖುಷ್ ಆಗಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
06/11/2024 04:28 pm