ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ ಮಂದಿ. ಹೇಂಗ್ ಅದಿರಿ ನಿವೇನ್ ಬಿಡ್ರಿ ಹೇಂಗ್ ಇದ್ರು ನಡೆತೆತ್ರಿ ನಮಗ ಅಂತೀರಿ. ಇಲ್ಲೊಂದ ರೋಡ್ ನ್ಯಾಗ್ ಪುಗಸೆಟ್ಟಿ ಮಖಕ್ಕ ಹಚ್ಚಾಕ್ ಪೌಡರ್ ಕೊಡಾಕುಂತಾರ್ ನೋಡ್ರಿ ಅಂತಾ ಹೇಳಿದ್ರ.. ಹೀಂಗಾಗಿ ನಾವು ತಡಿ ಹೋಗಿ ಇಸ್ಕೊಂಡ್ ಬರುನ್ ಅಂತ ಹೋದ್ರ ಮೈಯ್ ತುಂಬಾ ಪೌಡರ್ ತನ್ನಿಂದ ತಾನ್ ಹಚ್ಚಿ ಕಳಿಸಿದಂಗ್ ಆಗೇತಿ ನೋಡ್ರಿ.
ಇದ ನೋಡ್ರಿ ನಮ್ಮ ಹಳೇ ಪಿ.ಬಿ ರೋಡ್ ಗಬ್ಬೂರ್ ಎಂಟ್ರಿಯಿಂದ ಬಿಡ್ನಾಳ ಕ್ರಾಸ್ ಮಟಾ ಎಷ್ಟ್ ಬೇಕ್ ಅಷ್ಟ ಪೌಡರ್ ಪುಗಸೆಟ್ಟಿ ಸಿಗತೇತಿ ನೋಡ್ರಿ ಅದನ್ನು ನಾವ್ ಹಚಕೋ ಬೇಕ್ ಅಂತೇನಿಲ್ಲ ಆ ರೋಡ್ ನ್ಯಾಗ್ ಓಡಾಡಿದ್ರ ತನಗ್ ತಾನ ಪೌಡರ್ ಹತ್ತಿ ಬಿಡತೆತಿ ನೋಡ್ರಿ. ಈ ರೋಡ್ ನ್ಯಾಗ್ ಇಷ್ಟ್ ಪೌಡರ್ ಬರಾಕ್ ಕಾರಣ ನಮ್ಮ PWD ಮತ್ತ ಕಾರ್ಪೊರೇಷನ್ ದವರ ನೋಡ್ರಿ.
ಈ ರೋಡ್ ಬಾಳ್ ಅಂದ್ರ 1 ಕಿಲೋ ಮೀಟರ್ ಐತಿ. ಈ ರೋಡನ್ಯಾಗ್ ಎಲ್ಲಿ ಬೇಕ ಅಲ್ಲಿ ತೆಗ್ಗ್ ಬಿದ್ದಾವು. ಅವನ್ನ ಮುಚ್ಚು ಕೆಲ್ಸಾ ಮಾಡೇ ಇಲ್ಲ ರೀ. ಇನ್ನ ಶಿಗ್ಗಾವಿ ಬೈ ಎಲೆಕ್ಷನ್ ಬಂದಿದ್ದಕ್ಕ ಸಿಎಂ ಮತ್ತ ಬ್ಯಾರೇ ಬ್ಯಾರೇ ಮಿನಿಸ್ಟರ್ ಈ ರೋಡ್ ನ್ಯಾಗ್ ಹಾದ ಹೋಗ್ತಾರ್ ಅಂತ ತೆಗ್ಗ್ ಬಿದ್ದಲ್ಲಿ ಕಾಂಕ್ರಿಟ್ ಮಿಕ್ಸ್ ಇದ್ದ ಕಲ್ಲು ಮಣ್ಣ ತಂದ ಬಿಟ್ಟಿ ಬ್ಯಾಸರ್ ಲೇ ಹಾಕಿ ಹೋಗಿ ಬಿಟ್ಟಾರ್ ಹೀಂಗಾಗಿ ಇಲ್ಲಿ ಪೌಡರ್ ಫ್ಯಾಕ್ಟರಿ ಹುಟ್ಟೇತಿ ನೋಡ್ರಿ.
ಇಲ್ಲಿ ಬೈಕ್ ನ್ಯಾಗ್ 1 ವಾರ ಓಡ್ಯಾಡಿದ್ರ ಅಸ್ತಮಾ ಅಂತೂ ಬರುದ್ ಗ್ಯಾರಂಟಿ. ಇನ್ನೊಂದ್ ಕಥಿ ಕೇಳ್ರಿ ಮಿನಿಸ್ಟರ್ ಏನಾದ್ರು ಈ ರೋಡ್ ನ್ಯಾಗ್ ಬರ್ತಾರ್ ಅಂತಾ ತಿಳಿತಂದ್ರ ಒಂದ ಟ್ಯಾಂಕರ್ ತಗೊಂಡು ಆ ಮಗ್ಗಲ್ ಈ ಮಗ್ಗಲ್ ನೀರ್ ಹಾಕಿ ದೂಳ ಏಳದಂಗ್ ಮಾಡ್ತಾರ್. ಅವರ ಅತ್ತಾಗ್ ಹೋದ ಮ್ಯಾಲ್ ಅದೇನೋ ಅಂತಾರ್ ಅಲ್ಲ ನಾಯಿ ಬಾಲ್ ಡೊಂಕ್ ಅಂತಾ ಹಂಗ್ ಆಗೇತಿ ನೋಡ್ರಿ PWD ಮತ್ತ ಕಾರ್ಪೊರೇಷನ್ದವರ ಕೇತ್ತಾಬಾಜಿ ಕೆಲ್ಸ್.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
06/11/2024 01:13 pm