ಹುಬ್ಬಳ್ಳಿ: ಜಮೀರ್ ಅಹ್ಮದ್ ಈತನೊಬ್ಬ ದೇಶದ್ರೋಹಿ ವ್ಯಕ್ತಿ, ವಕ್ಫ್ ಅದಾಲತ್ ನಡೆಸಿದ್ದಾನೆ. ಕಾಂಗ್ರೆಸ್ ತನ್ನ ಚಾಳಿಯನ್ನ ನೆಹರೂ , ಗಾಂಧಿ ಇಂದ ಸಿದ್ದರಾಮಯ್ಯವರೆಗೂ ಬಿಟ್ಟಿಲ್ಲ. ಜಮೀರ್ ಅಹ್ಮದ್ ಅವರನ್ನ ಕೇವಲ ಗಡಿಪಾರು ಮಾಡೋದಲ್ಲ ಗಲ್ಲಿಗೇರಿಸಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಕ್ಫ್ ನಿಂದ ಲಕ್ಷಾಂತರ ರೈತರು ಬೀದಿ ಪಾಲಾಗುತ್ತಿದ್ದಾರೆ. ರಾಜ್ಯವನ್ನ ಜಮೀರ್ ಏನು ಮಾಡೋಕೆ ಹೊರಟಿದ್ದಾರೆ ಎಂದು ಜಮೀರ್ ಅಹ್ಮದ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/11/2024 04:21 pm