ಹುಬ್ಬಳ್ಳಿ: ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರ, ಆರ್. ಅಶೋಕ್ ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ಅನ್ನೋ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಯುಕ್ತದಲ್ಲಿ ಒಳಗಡೆ ಏನು ಪ್ರಶ್ನೆ ಕೇಳಿದಾರೇ ಏನು ಉತ್ತರ ಕೊಟ್ಟಿದ್ದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೇನು ಗೊತ್ತಾ? ವಾಪಸ್ ವಿಚಾರಣೆಗೆ ಕರೀಬಹುದು. ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳಿದ್ದಾರೆ ಅನ್ನೋದಕ್ಕೆ ನೀವೆಲ್ಲರೂ ಖುಷಿ ಪಡಬೇಕು ಎಂದರು.
ಲೋಕಾಯುಕ್ತರನ್ನು ನೇಮಕ ಮಾಡಿದ್ದು ಬಿಜೆಪಿ ಕಾಲದಲ್ಲಿ. ಅಶೋಕ್ ಮ್ಯಾಚ್ ಫಿಕ್ಸಿಂಗ್ ಪದ ಬಳಕೆ ಮಾಡಿದ್ದು ನ್ಯಾಯಾಲಯಕ್ಕೆ, ನ್ಯಾಯಾಲಯದ ಪೀಠಕ್ಕೆ ಮಾಡಿರೋ ಅವಮಾನ. ನ್ಯಾಯಾಲಯಗಳ ಮೇಲೆ ಆ ರೀತಿ ಮಾತನಾಡಿರೋದು ದೊಡ್ಡ ಅಪಮಾನ.
ರಾಜಕಾರಣಿಗಳು ನೇಮಕ ಮಾಡಿರೋ ಪೋಸ್ಟ್ ಅಲ್ಲ ಅದು. ಸಂವಿಧಾನ ನೇಮಕ ಮಾಡಿರೋದು. ಲೋಕಾಯುಕ್ತ ಅಧಿಕಾರಿಗಳು, ಅಶೋಕ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಡಿಸಿಎಮ್ ಡಿಕೆ ಶಿವಕುಮಾರ್ ಒತ್ತಾಯಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/11/2024 05:25 pm