ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿತಾಯಿಗೆ ರೈತರಿಂದ ವಿಶೇಷ ಪೂಜೆ : ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಣೆ

ಸಿದ್ದಾಪುರ : ತಾಲೂಕಿನಲ್ಲಿಂದು ರೈತರು ಗದ್ದೆ ತೋಟಗಳಲ್ಲಿ ವಿಶೇಷವಾಗಿ ಹೂವು ತಳಿರು ತೋರಣಗಳಿಂದ ಸಿಂಗರಿಸಿ ಭೂಮಿ ಹುಣ್ಣಿಮೆ  ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

 ಫಲ ತುಂಬಿದ ಹೊಲಗದ್ದೆಗಳಿಗೆ ಕಜ್ಜಾಯ ಕಡುಬು ಪಾಯಸ ಬಗೆ ಬಗೆಯ ತಿನಿಸುಗಳ ನೈವೇದ್ಯ ಅರ್ಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸಲಾಗುತ್ತದೆ, ಗರ್ಭಿಣಿ ಮಹಿಳೆಗೆ ಸೀಮಂತ ಮಾಡುವ ರೀತಿಯಲ್ಲಿಯೇ ಭೂಮಿ ತಾಯಿಗೂ ಸಹ ಪೂಜೆ ಸಲ್ಲಿಸಲಾಗುತ್ತದೆ.

 ರೈತರು ಮಳೆಗಾಲದಲ್ಲಿ ಬೆಳೆದ ಬೆಳೆಯು ಇನ್ನು ಕೆಲವೇ ತಿಂಗಳುಗಳಲ್ಲಿ ಕೈ  ಸೇರಲಿದ್ದು ಮುಂದಿನ ಫಸಲು ಉತ್ತಮ ರೀತಿಯಲ್ಲಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಹಣ್ಣು ಕಾಯಿ  ಪೂಜಿಸಲ್ಲಿಸುತ್ತಾರೆ, ಪೂಜೆಯ ನಂತರ ಕಾಗೆಗಳಿಗೆ ಎಡೆಇಟ್ಟು ಅವುಗಳು ತಿಂದ ನಂತರ  ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಆಕಳುವಿಗೆ  ಎಡೆ ನೀಡಿ ನಂತರ ಮನೆಮಂದಿ ಊಟ ಮಾಡುವುದು ಹಲವು ಕಡೆಗಳಲ್ಲಿ ಆಚರಿಸುವುದು ಪದ್ಧತಿಯಾಗಿದೆ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಸ್ವಲ್ಪ ಪದ್ಧತಿ ವಿಭಿನ್ನವಾಗಿ ಆಚರಿಸುವುದು ಕೂಡ ಕಂಡುಬರುತ್ತದೆ.

Edited By : PublicNext Desk
Kshetra Samachara

Kshetra Samachara

17/10/2024 01:06 pm

Cinque Terre

4.64 K

Cinque Terre

0

ಸಂಬಂಧಿತ ಸುದ್ದಿ