ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಗದ್ದೆಯಲ್ಲಿ ನಡೆಯುತ್ತಿದ್ದ ಗಾಯತ್ರೀ ಮಹಾ ಸತ್ರ ನವೆಂಬರ್ 5ಕ್ಕೆ ಸಂಪನ್ನ

ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯವಿನಾಯಕ ಹಾಗೂ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಗಾಯತ್ರೀ ಮಹಾಸತ್ರ 372ನೇ ದಿನವಾದ ನವೆಂಬರ್ 5ರಂದು ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಧಾನ ವಿಶ್ವಸ್ಥ, ಅರ್ಚಕ ವಿನಾಯಕ ಹೆಗಡೆ ತಿಳಿಸಿದರು.

ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿ, ನವೆಂಬರ್ 4ರ ಸಂಜೆ ಆಗಮಿಸಿ ವಾಸ್ತವ್ಯ ಮಾಡಲಿರುವ ಶ್ರೀಗಳು, 5ರಂದು ನಡೆಯುವ ಮಹಾ ಮಂಗಲ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯ ನೀಡಲಿದ್ದಾರೆ. ದೇವಸ್ಥಾನದ ಭಕ್ತರ ಸಹಕಾರದಲ್ಲಿ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಸಂಪನ್ನವಾಗಿಸಲಾಗುತ್ತಿದ್ದು, ನೂರಾರು ಕೈಗಳು ಈ ಮಂಗಲೋತ್ಸವದ ಯಶಸ್ಸಿಗೆ ಜೊತೆಯಾಗಿವೆ ಎಂದರು.

ಹಿಂದೆ ಸ್ವರ್ಣವಲ್ಲೀ ಮಠಾಧೀಶರು ಆಗಮಿಸಿದ್ದರು. ನೆಲಮಾವು ಮಠದ ಶ್ರೀಗಳೂ ಈ ಹವನದಲ್ಲಿ ಭಾಗವಹಿಸಿ ಧರ್ಮ ಸಭೆ ನಡೆಸಿಕೊಟ್ಟಿದ್ದರು. ಲಕ್ಷ ಮೋದಕ ಹವನ, ಯೋಗ ಪಟ್ಟಾಭಿಷೇಕದಂತಹ ಧಾರ್ಮಿಕ ಮಹತ್ವದ ಕಾರ್ಯದ ಜೊತೆ ಇದೂ ಸೇರಿದೆ. ಅನೇಕ ವೈದಿಕರು, ಗಾಯತ್ರೀ ಉಪದೇಶಿತರು ನಿರಂತರ ಹವನದಲ್ಲಿ ಭಾಗವಹಿಸಿದ್ದಾರೆ. ಅಗ್ನಿ ಆರದಂತೆ ವರ್ಷಂಪರ‍್ಯಂತ ಹವನ ನಡೆಸಲಾಗಿದೆ. ಕಲಗದ್ದೆಯಲ್ಲಿ ಹಿಂದೂ ಭಕ್ತರ ಜೊತೆ ಮುಸ್ಲಿಂ ಧರ್ಮೀಯರೂ ಭಕ್ತಿ ಭಾವದಲ್ಲಿ ಭಾಗವಹಿಸುವದು ನಮಗೆ ಭಾವೈಕ್ಯತೆಯ ಹೆಮ್ಮೆ ಇದೆ ಎಂದರು.

ನ.4ರಂದು ಸಾಮೂಹಿಕ ಪ್ರಾರ್ಥನೆ, ಸಂಕಲ್ಪ, ಗಣೇಶ ಪೂಜೆ, ಗಣೇಶ ಯಾಗ, ರುದ್ರಹೋಮ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ 4ರಿಂದ ವೇದ ಮಾತಾ ಗಾಯತ್ರೀ ಕುರಿತು ಡಾ. ಬಂದಗದ್ದೆ ನಾಗರಾಜ ಅವರಿಂದ ಉಪನ್ಯಾಸ, ಶ್ರೀಗಳ ಆಗಮನ, 7ರಿಂದ ಗಾಯತ್ರೀ ಮಹಿಮೆ ತಾಳಮದ್ದಲೆ ನಡೆಯಲಿದೆ. ನ.5ರಂದು ಬೆಳಿಗ್ಗೆ ಲಕ್ಷ್ಮೀನಾರಾಯಣ ಹೃದಯ ಹೋಮ, ದುರ್ಗಾ, ಗಾಯತ್ರೀ ಹವನ, ಶ್ರೀಗಳ ಸಾನ್ನಿಧ್ಯದಲ್ಲಿ ಮಹಾ ಪೂರ್ಣಾಹುತಿ ಅಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. 12ಗಂಟೆಗೆ ಧರ್ಮಸಭೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ನ.4ರಂದು ಸಂಜೆ 4ಕ್ಕೆ ಶ್ರೀದೇವರಿಗೆ ಯಾಗ ಶಾಲೆ ಸಮರ್ಪಣೆಯನ್ನು ಶ್ರೀಗಳು ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆಗಮಿಸಲಿದ್ದಾರೆ. ನ.5ರ 12ಕ್ಕೆ ಧರ್ಮ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಹಾಗೂ ವಿ.ಗೋಪಾಲಕೃಷ್ಣ ಶರ್ಮಾ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಗಾಯತ್ರೀ ಪುರಸ್ಕಾರ 12 ಸಾಧಕರಿಗೆ ಇದು ಪ್ರದಾನ ಆಗಲಿದೆ ಎಂದರು.

ಕಾರ್ಯಾಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಈಗಾಗಲೇ ಒಂದು ಸ್ವಾಗತ ಸಮಿತಿ ರಚಿಸಿಕೊಳ್ಳಲಾಗಿದೆ. ಡಾ. ಗಿರಿಧರ ಕಜೆ, ಶೇಷಗಿರಿ ಭಟ್ಟ ಸಿಗಂಧೂರು, ವಿ.ಉಮಾಕಾಂತ ಭಟ್ಟ ಕೆರೇಕೈ, ಆರ್.ಎಂ.ಹೆಗಡೆ ಬಾಳೇಸರ ಗೌರವಾಧ್ಯಕ್ಷರುಗಳಾಗಿ, ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವೆಂಕಟೇಶ ಹೊಸಬಾಳೆ, ಆರ್.ಎಸ್.ಹೆಗಡೆ ಹರಗಿ, ಶಿವಾನಂದ ಹೆಗಡೆ ಕಡತೋಕ, ದೀಪಕ್ ದೊಡ್ಡೂರು, ಜಿ.ಎನ್.ಹೆಗಡೆ ಬೆಂಡೆಗದ್ದೆ ಉಪಾಧ್ಯಕ್ಷರಾಗಿ, ಗಣಪತಿ ಹೆಗಡೆ ಗುಂಜಗೋಡ ಪ್ರಧಾನ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ವಿವೇಕ ಭಟ್ಟ, ಕಾರ್ಯದರ್ಶಿಗಳಾಗಿ ವೆಂಕಟೇಶ ಬೊಗ್ರಿಮಕ್ಕಿ, ವಿನಯ ಹೊಸ್ತೋಟ ಸಹಕಾರ ನೀಡುತ್ತಿದ್ದಾರೆ. 50ಕ್ಕೂ ಅಧಿಕ ಜನರ ಸವಾಗತ ಸಮಿತಿ ರಚಿಸಲಾಗಿದೆ. ಎಲ್ಲರ ಪ್ರೋತ್ಸಾಹ, ಉತ್ತೇಜನ ಈ ಧಾರ್ಮಿಕ ಕಾರ್ಯದ ಬಲವಾಗಿದೆ ಎಂದರು.

ಈ ವೇಳೆ ಗಣಪತಿ ಹೆಗಡೆ‌ ಗುಂಜಗೋಡ ಸ್ವಾಗತಿಸಿದರು.

ಆರ್‌ವಿಡಿ, ಬಾಲಿಕೊಪ್ಪರಿಗೆ ಪ್ರಶಸ್ತಿ ನವೆಂಬರ್ 5ರಂದು 12ಗಂಟೆಗೆ ರಾಜಮಾನ್ಯ ಪ್ರಶಸ್ತಿಯನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರಿಗೆ ಹಾಗೂ ಸಿಂಧೂರ ಶ್ರೀ ಪ್ರಶಸ್ತಿಯನ್ನು ಡಾ. ಗೋಪಾಲಕೃಷ್ಣ ಶರ್ಮಾ ಬಾಲಿಕೊಪ್ಪ ಅವರಿಗೆ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ 11 ಸಾಧಕರಿಗೆ ಗಾಯತ್ರೀ ಪುರಸ್ಕಾರ ಪ್ರದಾನ ಆಗಲಿದೆ. ಶ್ರೀರಾಘವೇಶ್ವರ ಭಾರತೀ ಶ್ರೀಗಳು ಈ ಪ್ರಶಸ್ತಿ, ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

Edited By : PublicNext Desk
Kshetra Samachara

Kshetra Samachara

14/10/2024 09:36 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ