ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿ ಹಕ್ಕಿಗೆ ಅರಣ್ಯವಾಸಿಗಳು ಕಾನೂನು ಸಂಕೋಲೆಯ ಕೊಂಡಿಯಲ್ಲಿ ಬಂಧನ - ರವೀಂದ್ರ ನಾಯ್ಕ

ಸಿದ್ದಾಪುರ: ಅರಣ್ಯ ಭೂಮಿ ಅರಣ್ಯೇತರ ಚಟುವಟಿಕೆಗೆ ಕಾನೂನು ಮತ್ತು ನ್ಯಾಯಾಲಯದ ನಿರ್ಭಂದನೆಯಿಂದ  ಅರಣ್ಯಭೂಮಿ ಹಕ್ಕಿನಿಂದ ವಂಚಿತರಾಗಿ ಅರಣ್ಯವಾಸಿಗಳು ಕಾನೂನು ಸಂಕೋಲೆಯ ಕೊಂಡಿಯಲ್ಲಿ ಬಂಧನವಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಸೋಮವಾರ  ಸಿದ್ದಾಪುರ ತಾಲೂಕಿನ ತಂಡಾಗುಂಡಿ  ಗ್ರಾಮ ಪಂಚಾಯತ್ ಕುಳ್ಳೇಯಲ್ಲಿ ನಿಲ್ಕುಂದ, ಹೆಗ್ಗರಣೆ ಮತ್ತು ತಂಡಾಗುಂಡಿ  ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉಧ್ದೇಶಿಸಿ ಮಾತನಾಡುತ್ತ ಹೇಳಿದರು.

ಅರಣ್ಯ ಭೂಮಿ ಹಕ್ಕಿನ ಕಾಯಿದೆ  ಅನುಷ್ಠಾನದಲ್ಲಿ ವಿಫಲ ಮತ್ತು ಇಚ್ಚಾಶಕ್ತಿ ಕೊರತೆಯಿಂದ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ವಂಚಿತರಾಗಿದ್ದಾರೆ. ದಿನದಿಂದ ದಿನಕ್ಕೆ ಅರಣ್ಯ ಕಾನೂನು ಮತ್ತು ಸುಪ್ರೀಂ ಕೊರ್ಟನ ಆದೇಶದಿಂದ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ನಿಯಂತ್ರಣ ಹೆಚ್ಚುತ್ತಿರುವುದರಿಂದ ಇಂದು ಅರಣ್ಯವಾಸಿಗಳು ಕಾನೂನು ತೊಡಕಿನಲ್ಲಿ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು ಚಲೋ:

ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ನವೆಂಬರ 7ರ ಬೆಂಗಳೂರು ಚಲೋ ಯಶ್ವಸಿಗೊಳಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Edited By : PublicNext Desk
Kshetra Samachara

Kshetra Samachara

14/10/2024 09:43 pm

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ