ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾವರ; ಗ್ಯಾಸ್ ಪಂಪ್ ನಿರ್ಮಾಣಕ್ಕೆ ಸ್ಥಳಿಯರ ವಿರೋಧ

ಹೊನ್ನಾವರ: ಪಟ್ಟಣದ ಕರ್ಕಿನಾಕಾ ಸಮೀಪದ ಜನವಸತಿ ಪ್ರದೇಶದಲ್ಲಿ  ಗ್ಯಾಸ್ ಪಂಪ್ ನಿರ್ಮಿಸಲು ಅನುಮತಿ ನೀಡಬಾರದು ಎಂದು  ಸ್ಥಳಿಯ ನಿವಾಸಿಗಳು. ಮುಖ್ಯಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

 ಹೊನ್ನಾವರ ಹೋಬಳಿಯ ಸರ್ವೆ ನಂಬರ್ 82 ಹಿಸ್ಸಾ 9 ಕ್ಷೇತ್ರದ 0-8-0 ಪ್ರದೇಶದಲ್ಲಿ ಗ್ಯಾಸ ಬಂಕ್‌ನ್ನು ನಿರ್ಮಿಸಬಾರದು. ಈ ಪ್ರದೇಶವು ಜನವಸತಿ ಇದ್ದು, ಈ ಸರ್ವೆ ನಂಬರ್  ವಸತಿ ಉದ್ದೇಶದ ಬಗ್ಗೆ ಭೂ ಪರಿವರ್ತಿತವಾಗಿದ್ದು, ಪಾಳು ಬಿದ್ದ ಜಾಗ ಆಗಿದೆ. ಈ ಭಾಗದ  ಸುತ್ತ-ಮುತ್ತಲೂ ಕೇವಲ 15-20 ಮೀಟರ್ ವ್ಯಾಪ್ತಿಯಿಂದ ಆರಂಭವಾಗುವಂತೆ ಹಲವಾರು ವಾಸ್ತವ್ಯದ ಮನೆಗಳು ಸೇರಿದಂತೆ ಅಂಗಡಿ, ಗ್ಯಾರೇಜ್, ಇಲೆಕ್ಟ್ರಾನಿಕ್ ಉಪಕರಣಗಳ ಮಳಿಗೆ, ಕ್ಲಿನಿಕ್, ಮದುವೆಯ ಮಂಟಪ ಆಟೋರಿಕ್ಷಾ ನಿಲ್ದಾಣ, ಹೋಟೆಲ್ ಇದೆ. 50 ಮೀಟರ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್ 66 ಹಾದು ಹೋಗಿರುದಲ್ಲದೇ, ವಿದ್ಯುತ್ ಲೈನ್ ಹಾದು ಹೋಗಿದೆ. ಇದಲ್ಲದೇ ಈ ಭಾಗದಲ್ಲಿ ಸಮರ್ಪಕ ಪಾರ್ಕಿಂಗ್ ಘನ ವಾಹನಗಳು ಬಂದು ಹೋಗಲು ಸೂಕ್ತ ಸ್ಥಳಾವಕಾಶ ಇಲ್ಲ.

ಗ್ಯಾಸ್ ಬಂಕ್‌ ನಿರ್ಮಿಸುವ ಉದ್ದೇಶಿಸಿದ ಸ್ಥಳವು ಮರಳು ಮಿಶ್ರಿತವಾಗಿ ತಗ್ಗು ಪ್ರದೇಶದಲ್ಲಿ ಇದೆ. ಸುತ್ತ-ಮುತ್ತಲೂ ನೂರಕ್ಕಿಂತ ಹೆಚ್ಚಿನ ವಾಸ್ತವ್ಯದ ಮನೆ ಇದ್ದು, ಗ್ಯಾಸ್ ಬಂಕ್  ನಿರ್ಮಾಣದಿಂದ ಭಯದಲ್ಲೇ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.  ಜನವಸತಿ ಪ್ರದೇಶದ ಜೊತೆ ಇಕ್ಕಟ್ಟಾದ ಸ್ಥಳ, ಸೂಕ್ತ ಪಾರ್ಕಿಂಗ್, ಗ್ಯಾಸ್ ಸ್ಟೋರೆಜ್ ಇತ್ಯಾದಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಮಾನದಂಡಗಳಂತೆ ಗುಂಡಿಗಳು ಮರಳು ಮಿಶ್ರಿತ ಮಣ್ಣು ಸದೃಢತೆ ಹೊಂದಿರದ ಕಾರಣ ಕುಸಿತವಾಗುವಾಗುವ ಸಾಧ್ಯತೆಯು ಇದೆ. ಒಂದೊಮ್ಮೆ ಅನಾಹುತ ಸಂಭವಿಸಿದರೆ ಸುತ್ತ-ಮುತ್ತಲಿನ ಮನೆಗಳಿಗೆ ಹಾನಿಯಾಗುವ ಜೊತೆ ಗ್ಯಾಸ್ ಸೋರಿಕೆಯಾಗುವ ಸಾಧ್ಯತೆ ಇದೆ. ಸ್ಥಳಿಯ ನಿವಾಸಿಗಳ ವಿರೋಧವನ್ನು ಪರಿಗಣಿಸಿ  ಗ್ಯಾಸ್ ಬಂಕ್‌ನ್ನು ನಿರ್ಮಾಣ ಮಾಡುವುದರಿಂದ ಅನುಕೂಲತೆಗಿಂತ ಅನಾಹುತವಾಗುವ ಸಾಧ್ಯತೆಯೇ ಹೆಚ್ಚಾಗಿದ್ದು, ಇದೆಲ್ಲವನ್ನು ಪರಿಗಣಿಸಿ ಯಾವುದೇ ರೀತಿಯ ಪರವಾನಿಗೆ ಗ್ಯಾಸ್ ಬಂಕ್‌ ನಿರ್ಮಾಣಕ್ಕೆ ನೀಡಬಾರದೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

   ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಸುಬ್ರಾಯ ಗೌಡ, ಸ್ಥಳಿಯ ನಿವಾಸಿಗಳಾದ ಎಸ್.ಎಂ.ನಾಯ್ಕ, ಕೇಶವ.ನಾಯ್ಕ, ಗುರುನಾಥ ನಾಯ್ಕ, ಸೋಮನಾಥ ನಾಯ್ಕ, ನಾಗೇಶ ಮೇಸ್ತ, ನಾಯ್ಯವಾದಿ  ಭಾಸ್ಕರ ಭಂಡಾರಿ, ಡಾ.ಪ್ರಕಾಶ.ನಾಯ್ಕ, ಡಾ.ಸತೀಶ ಶೇಟ್,ಮುಕ್ತಾ ನಾಯ್ಕ, ಮೋಹನ ತಿಮ್ಮ ಗೌಡ, ರಾಮದಾಸ ಭಂಡಾರಿ, ಕೆ.ಆರ್.ಭಟ್, ಶೇಖರ ಮತ್ತಿತರಿದ್ದರು. ಗ್ಯಾಸ್ ಪಂಪ ನಿರ್ಮಿಸಲು ಕಾಮಗಾರಿ ಮುಂದುವರೆಸಿದರೆ ಉಗ್ರ ಹೋರಾಟ ಮಾಡುವುದಾಗಿಯು ಎಚ್ಚರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/10/2024 09:24 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ