ಶಿರಸಿ : ತಾಲೂಕಿನ ಆನಗೋಡ ಕೊಪ್ಪದ ರಸ್ತೆಯಲ್ಲಿ ಯುವತಿಯ ಕೈಹಿಡಿದು ಎಳೆದು ಓಡಿಹೋಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃತ್ಯ ಎಸಗಿದ ಹಾವೇರಿ ಮೂಲದ ಯುವಕನು ಬಳಿಕ ಗ್ರಾಮಸ್ಥರನ್ನು ಕಂಡು ಬೈಕ್ ಬಿಟ್ಟು ಓಡಿ ಹೋಗಿದ್ದ. ಬಳಿಕ ಗ್ರಾಮಸ್ಥರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಲ್ಲಿನ ಬಾಳೆಕೊಪ್ಪದಲ್ಲಿ ಗಾರೆ ಕೆಲಸಕ್ಕೆಂದು ಬಂದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ. ಪೊಲೀಸರಿಂದ ಹೆಚ್ವಿನ ತನಿಖೆ ನಡೆಯಬೇಕಿದೆ.
PublicNext
22/10/2024 04:15 pm