ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೆಹಲಿಯ ಬಿಜೆಪಿ ನಾಯಕರಿಂದ ಕರೆ ಬಂದಿದೆ ನೀವೆ ತೀರ್ಮಾನಿಸಿ ಎಂದಿದ್ದಾರೆ - ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಚನ್ನಪಟ್ಟಣ ಬೈ ಎಲೆಕ್ಷನ್ ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಮಾಜಿ ಪ್ರಧಾನಿ ದೇವೆಗೌಡರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೆಹಲಿಯ ಬಿಜೆಪಿ ನಾಯಕರಿಂದ ಕರೆ ಬಂದಿದೆ ನೀವೆ ತೀರ್ಮಾನಿಸಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.

ಶಿಗ್ಗಾಂವಿ & ಸಂಡೂರು ಟಿಕೆಟ್ ಘೋಷಣೆ ಆಗಿದೆ. ಆದ್ರೆ ಚನ್ನಪಟ್ಟಣ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೊನೆ ಹಂತದಲ್ಲಿ ಏನ್ ಆಗುತ್ತೆ ಅನ್ನೋ ಕುತೂಹಲ ಎಲ್ಲಿರಿಗೂ ಇದೆ. ಕುಮಾರಸ್ವಾಮಿ ದೆಹಲಿಗೆ ಹೋಗಬೇಕಾದ ಒತ್ತಡ ಇದ್ರೂ ಕೂಡ ಇವತ್ತು ಕೆಲವು ನಿರ್ಧಾರಕ್ಕಾಗಿ ಇಲ್ಲೇ ಇದ್ದಾರೆ..

ಹೆಚ್‌ಡಿಡಿ, ಹೆಚ್‌ಡಿಕೆ ಮತ್ತು ಜನರ ನಂಟು ಕೇವಲ ರಾಜಕೀಯ ನಂಟಲ್ಲ, 30-40 ವರ್ಷದಿಂದ ರಾಮನಗರದ ಜೊತೆ ನಂಟು ಇದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ನಮ್ಮದೇ ಆದ ಮತಗಳು ಇದ್ದಾವೆ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಕಂಡಿದ್ದಾರೆ. ತೀರ್ಮಾನ ಏನೇ ಆಗಬಹುದು. ರಾಷ್ಟ್ರೀಯ ಮಟ್ಟದ ನಾಯಕರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರ ಹತ್ರ ಮಾತನಾಡಿದ್ದಾರೆ, ನೀವು ಸ್ವಾತಂತ್ರ್ಯವಾಗಿ ತೀರ್ಮಾನ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರು ಗೌರವದಿಂದ ಕುಮಾರಸ್ವಾಮಿ ಅವರನ್ನ ನಡೆಸಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರಿಗೆ ನಮ್ಮಿಂದ ಸಣ್ಣ ತಪ್ಪು ಕೂಡ ಆಗಬಾರದು. ಮಂಡ್ಯದಲ್ಲಿ ನನಗೆ ಮೊದಲ ಅವಕಾಶ ಕೊಟ್ರು, ಆ ಚುನಾವಣೆ ಯಾವ ರೀತಿ ನಡೆದಿದೆ ಅಂತ ಇಡೀ ರಾಜ್ಯದ ಜನತೆಗೆ ಗೊತ್ತು. ರಾಜಕೀಯ ಷಡ್ಯಂತ್ರ ಅಲ್ಲಿಗೆ ಸುಮ್ಮನೆ ಆಗಲಿಲ್ಲ. ನಂತ್ರ ರಾಮನಗರದಲ್ಲಿ ಕಾರ್ಯಕರ್ತರ ಒತ್ತಡದಿಂದ ನಾನು ಸ್ಪರ್ಧೆ ಮಾಡಿದೆ ರಾಮನಗರದಲ್ಲೂ ಕಾಣದ ರಾಜಕೀಯ ಕೈವಾಡ ನಡೆದಿದೆ.

ಇಲ್ಲಿ ಮೈತ್ರಿಗೆ ಎಲ್ಲೂ ಸಮಸ್ಯೆ ಆಗಬಾರದು ಮುಂದೆ ಕಾಲವೇ ಉತ್ತರ ಕೊಡುತ್ತೆ, ಚನ್ನಪಟ್ಟಣ ಒಂದು ತಿಂಗಳಿನಿಂದ ಸಂಚಾರ ಮಾಡುತ್ತಿದ್ದೇನೆ. ಚನ್ನಪಟ್ಟಣ ವಿಚಾರದಲ್ಲಿ ನಾವು ಯಾವತ್ತಾದ್ರ ಜೆಡಿಎಸ್ ಪಕ್ಷವೇ ನಿರ್ಧಾರ ಮಾಡುತ್ತೆ ಅಂತ ಹೇಳಿದ್ನಾ..? ಚುನಾವಣೆ ನಿಲ್ಲುತ್ತೇನೆ ಅಂತ ಎಲ್ಲಾದ್ರೂ ಹೇಳಿದ್ನಾ..?

ಒಬ್ಬ ವ್ಯಕ್ತಿಯಿಂದ ಮೈತ್ರಿಗೆ ಕಪ್ಪು ಚುಕ್ಕೆ ತರುವ ಕೆಲಸ ಆಗಬಾರದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಅಲ್ದೇ ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಮೈತ್ರಿ ದಕ್ಕೆ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Edited By : Abhishek Kamoji
PublicNext

PublicNext

22/10/2024 03:06 pm

Cinque Terre

103.84 K

Cinque Terre

5

ಸಂಬಂಧಿತ ಸುದ್ದಿ