ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಸದ ಇ.ತುಕಾರಾಂ ಹಾಗೂ ಜಿ. ಕುಮಾರ್‌ನಾಯಕ್‌ ಇಬ್ಬರನ್ನೂ ಅನರ್ಹತೆಗೊಳಿಸಿ - ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು

ನವದೆಹಲಿ : ಬಳ್ಳಾರಿಯ ಸಂಸದ ಇ.ತುಕಾರಾಂ ಮತ್ತು ರಾಯಚೂರು ಸಂಸದ ಜಿ ಕುಮಾರ್ ನಾಯಕ್ ಇಬ್ಬರನ್ನೂ ಅನರ್ಹಗೊಳಿಸಬೇಕು ಎಂದು ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದ ನಿಯೋಗ ದೂರು ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಬಳಸಿಕೊಂಡಿದ್ದಾರೆ. ಕಳೆದ ತಿಂಗಳು ಇ.ಡಿ. ಪ್ರೆಸ್ ನೋಟನ್ನಲ್ಲೂ ಚುನಾವಣೆಗೆ ಬಳಸಿಕೊಂಡಿದ್ದರ ಮಾಹಿತಿ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾರೆ. ಈ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವು ಆ ಹಣವನ್ನು ದುರ್ಬಳಕೆ ಮಾಡಿಕೊಂಡು ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಕ್ಕೆ ಆ ಹಣವನ್ನು ಬಳಸಿದ್ದು ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ಸಂಸದ ತುಕಾರಾಂ ರನ್ನ ಸಂಸದ ಸ್ಥಾನದಿಂದ ಅನರ್ಹತೆಗೊಳಸಿಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

ಇದರ ಜೊತೆಗೆ ರಾಯಚೂರು ಸಂಸದ ಜಿ. ಕುಮಾರ್‌ನಾಯಕ್ ಮುಡಾ ಅಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ .ನಿವೇಶನ ಹಂಚಿಕೆ ಸಂದರ್ಭದಲ್ಲಿ ಮುಂದೆ ನಿಂತು ಸಿಎಂ ಸಿದ್ಧರಾಮಯ್ಯರ ಪರ ಮಾಡಿಕೊಟ್ಟಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಜಿ. ಕುಮಾರ್‌ನಾಯಕ್ ಅವರ ಸಂಸದ ಸ್ಥಾನವನ್ನ ಅನರ್ಹಗೊಳಿಸಬೇಕೆಂದು ದೂರು ನೀಡಲಾಗಿದೆ.

ವಿಜಯೇಂದ್ರ ಜೊತೆ ವಿಪಕ್ಷ ನಾಯಕ ಆರ್.ಅಶೋಕ್,ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಉಪಸ್ಥಿತಿರಿದ್ದರು.

Edited By : Abhishek Kamoji
PublicNext

PublicNext

22/10/2024 07:19 pm

Cinque Terre

27.31 K

Cinque Terre

1

ಸಂಬಂಧಿತ ಸುದ್ದಿ