ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ವಿದ್ಯುಕ್ತ ಚಾಲನೆ: ಸಾರ್ವಜನಿಕರಲ್ಲಿ ಹರ್ಷೋದ್ಘಾರ..!

ಹುಬ್ಬಳ್ಳಿ: ಬಹು ದಿನಗಳ‌ ಬಹು ನಿರೀಕ್ಷಿತ ಬೇಡಿಕೆ ಈಗ ಈಡೇರಿದ್ದು, ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಾಯೋಗಿಕ ಚಾಲನೆ ದೊರೆತಿದ್ದು, ಪುಣೆಯಿಂದ ಪ್ರಯಾಣ ಆರಂಭಿಸಿದ ವಂದೇ ಭಾರತ್ ರೈಲು ಮಿರಜ್ ಜಂಕ್ಷನ್ ತಲುಪಿದ್ದು, ಅಲ್ಲಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಲಿದೆ.

ಸಾಕಷ್ಟು ವೈಭವದೊಂದಿಗೆ ಮಿರಜ್‌ಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅದ್ದೂರಿಯಾಗಿ ಸ್ಥಳೀಯರು ಹಾಗೂ ರೈಲ್ವೆ ಸಿಬ್ಬಂದಿ ಸ್ವಾಗತಿಸಿದ್ದಾರೆ. ಹೌದು.. ಮಿರಜ್ ರೈಲು ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್‌ ರೈಲು, ನಿಲ್ದಾಣಕ್ಕೆ ರೈಲು ಬರ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಇಮ್ಮಡಿಗೊಂಡಿದೆ. ಮೋದಿ ಮೋದಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಸಂಭ್ರಮಿಸಿದರು.

ಇನ್ನೂ ಮೀರಜ್ ನಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ ರೈಲು, 8 ಬೋಗಿ ಹೊಂದಿರುವ ವಂದೇ ಭಾರತ್ ರೈಲು, ಪುಣೆಯಿಂದ ವಯಾ ಮೀರಜ್ ಮಾರ್ಗವಾಗಿ ಬೆಳಗಾವಿ ಮೂಲಕ ಹುಬ್ಬಳ್ಳಿ ತಲುಪಲಿದೆ. ಇನ್ನೂ ನೈರುತ್ಯ ರೈಲ್ವೆ ವಲಯದಿಂದ ಅವ್ಯವಸ್ಥೆಯ ಆರೋಪ ಕೇಳಿ ಬಂದಿದ್ದು, ಮಾಧ್ಯಮದ ಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಮಯ, ನಿಲ್ದಾಣದಲ್ಲಿ ಯಾವ ಪ್ಲಾಟ್ ಫಾರಂ ಕಡೆ ಯಾವ ರೈಲು ಬರುತ್ತದೆ ಎಂಬ ಮಾಹಿತಿ ಕೊಡದ ಸಿಬ್ಬಂದಿಯ ನಡೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 11:01 pm

Cinque Terre

81.47 K

Cinque Terre

16

ಸಂಬಂಧಿತ ಸುದ್ದಿ