ಕುಂದಗೋಳ : ಎಲ್ಲೆಡೆ ಡೆಂಗ್ಯೂ, ಮಲೇರಿಯಾ ಜಾಗೃತಿ ಮಾಡುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳೇ.. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ.....
ದಯವಿಟ್ಟು ತಾವೊಮ್ಮೆ ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದ
ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ಕೊಡಬೇಕು. ಆಗ ಅಲ್ಲಿನ ಜನ ಛೀ..ಥೂ..ಎಂದು ಮೂಗು ಮುಚ್ಚಿ ನೀರು ಪಡೆಯುವ ಸ್ಥಿತಿ ನಿಮಗೆ ಅರ್ಥವಾಗುತ್ತದೆ.
ಗುಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಿಗನಾಳ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಕೆಸರುಮಯವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕದ ಒಳಾಂಗಣದಲ್ಲಿ ನೀರು ಸಂಗ್ರಹವಾಗಿ ಕಾಲಿಡಲು ಜಾಗವೇ ಇಲ್ಲದೆ ಸಿಬ್ಬಂದಿ ಕಲ್ಲುಗಳನ್ನು ಇರಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಸ್ವಚ್ಛತೆ ಕಳೆದುಕೊಂಡ ಅನೈರ್ಮಲ್ಯ, ಕೊಳಚೆ ತುಂಬಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕಿಲ್ಲ. ಸದ್ಯ ಇನ್ನಾದರೂ ಅಧಿಕಾರಿಗಳು ಗಮನಿಸಿ ಜೀವ ಜಲ ನೀಡುವ ಘಟಕ ವ್ಯವಸ್ಥೆ ಸರಿಪಡಿಸಬೇಕು ಎನ್ನುವುದು ಜನಾಭಿಪ್ರಾಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2024 08:50 pm