", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736921489-V1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡದ ಶ್ರೀನಗರ ಸರ್ಕಲ್ ದಾಟಿ ಕೊಂಚ ಮುಂದೆ ಸಾಗಿದರೆ ಶಿವಾಲಯ ಸಿಗುತ್ತದೆ. ಈ ಶಿವಾಲಯದ ಎದುರಿಗೇ ಒಂದು ಐತಿಹಾಸಿಕ ಬಾವಿ ಇದೆ. ಅದನ್ನ...Read more" } ", "keywords": "Dharwad, historic well, Public Next report, citizen initiative, well conservation, Karnataka heritage, Dharwad news, community effort, preservation of historical sites.,Hubballi-Dharwad,Infrastructure,Government,News,Public-News", "url": "https://publicnext.com/node" } ಧಾರವಾಡ: ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಐತಿಹಾಸಿಕ ಬಾವಿಯ ರಕ್ಷಣೆಗೆ ಮುಂದಾದ ಜನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಐತಿಹಾಸಿಕ ಬಾವಿಯ ರಕ್ಷಣೆಗೆ ಮುಂದಾದ ಜನ

ಧಾರವಾಡ: ಧಾರವಾಡದ ಶ್ರೀನಗರ ಸರ್ಕಲ್ ದಾಟಿ ಕೊಂಚ ಮುಂದೆ ಸಾಗಿದರೆ ಶಿವಾಲಯ ಸಿಗುತ್ತದೆ. ಈ ಶಿವಾಲಯದ ಎದುರಿಗೇ ಒಂದು ಐತಿಹಾಸಿಕ ಬಾವಿ ಇದೆ. ಅದನ್ನು ತೋಳಮಟ್ಟಿ ಬಾವಿ ಎಂದು ಕರೆಯಲಾಗುತ್ತದೆ. ಈ ಬಾವಿ ಐತಿಹಾಸಿಕವಾದ ಬಾವಿ. ಆದರೆ, ಪಾಲಿಕೆ ಅದರ ರಕ್ಷಣೆಗೆ ಮುಂದಾಗಿರಲಿಲ್ಲ. ಬಾವಿಯ ತುಂಬ ಕಸ ಚೆಲ್ಲಿ ಅದರ ಅಂದವೇ ಹಾಳಾಗಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಇತ್ತೀಚೆಗಷ್ಟೇ ವರದಿಯೊಂದನ್ನು ಪ್ರಸಾರ ಮಾಡಿತ್ತು.

ವರದಿ ಪ್ರಸಾರವಾದ ನಂತರ ಪಾಲಿಕೆಯು, ಬಾವಿಯಲ್ಲಿ ಚೆಲ್ಲಿದ್ದ ಎಲ್ಲ ಕಸವನ್ನು ತೆಗೆದು ಹಾಕುವ ಕೆಲಸ ಮಾಡಿತ್ತು. ಆದರೆ, ಈ ತೋಳಮಟ್ಟಿ ಬಾವಿ ಐತಿಹಾಸಿಕವಾಗಿದೆ. ಅದರ ಸುತ್ತ ಗಿಡ, ಗಂಟಿಗಳು ಬೆಳೆದು ಬಾವಿ ಹಾವು, ಮುಂಗುಸಿಗಳ ತಾಣವಾಗಿತ್ತು. ಇದೀಗ ಸ್ಥಳೀಯರೇ ಆ ಬಾವಿಯ ಸುತ್ತ ಬೆಳೆದ ಗಿಡ, ಗಂಟಿಗಳನ್ನು ಕಡಿದು, ಕಸದ ಗುಂಡಿಯಂತಾಗಿದ್ದ ಬಾವಿಯ ಅಂದ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಬಾವಿಯಲ್ಲಿ ಚೆಲ್ಲಿದ್ದ ಎಲ್ಲ ಕಸವನ್ನು ತೆಗೆದು ಹಾಕಿ ಸುತ್ತ ಬೆಳೆದ ಮುಳ್ಳಿನ ಕಂಟಿಗಳನ್ನು ತೆಗೆದು ಅದರ ರಕ್ಷಣೆಗೆ ಮುಂದಾಗಿದ್ದಾರೆ. ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಬಿಜೆಪಿ ಮುಖಂಡ ಶಿವು ಹೂಗಾರ, ಸಂಜಯ ಸಾಲಿಮಠ, ಮಹೇಶ ಮೇಟಿ, ಗಣೇಶ ಶಿಲಾರೆ, ರಾಕೇಶ ಗಜಕೋಶ, ಮಂಜುನಾಥ ಅನಂತಪುರ, ಕೃಷ್ಣಾ, ಶುಭಂ ಹಂಚವಾಲೆ, ಪರಶುರಾಮ, ರಾಮಣ್ಣ ಹಡಪದ, ಪ್ರಶಾಂತ ಹಾಗೂ ಮುಬಾರಕ್ ತಟಗಾರ ತಂಡದವರು ಬಾವಿಯನ್ನು ಸ್ವಚ್ಛಗೊಳಿಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಏನೇ ಆಗಲಿ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿ ಐತಿಹಾಸಿಕ ಬಾವಿಯನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿರುವ ಅಲ್ಲಿನ ಸ್ಥಳೀಯರಿಗೆ ನಾವೂ ಒಂದು ಧನ್ಯವಾದ ಹೇಳಲೇಬೇಕಲ್ಲವೇ?

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 11:41 am

Cinque Terre

20.59 K

Cinque Terre

2

ಸಂಬಂಧಿತ ಸುದ್ದಿ