ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಧಾರವಾಡದತ್ತ ಮುಡಾ ಪ್ರಕರಣ ದೂರುದಾರ ಸ್ನೇಹಮಯಿ ಕೃಷ್ಣ - ಸಿಬಿಐ ತನಿಖೆಯಿಂದ ನ್ಯಾಯ ಸಾಧ್ಯ.!

ಹುಬ್ಬಳ್ಳಿ: ಇಂದು ಧಾರವಾಡ ಹೈಕೋರ್ಟ್ ಪೀಠದಲ್ಲಿ ಮುಡಾ ಹಗರಣ ಸಿಬಿಐ ತನಿಖೆ ಒಪ್ಪಿಸುವ ಬಗ್ಗೆ ತೀರ್ಪು ಹಿನ್ನಲೆ ಧಾರವಾಡದತ್ತ ತೆರಳುತ್ತಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಸದ್ಯ ಹುಬ್ಬಳ್ಳಿಯಿಂದ ಧಾರವಾಡ ಹೈಕೋರ್ಟ್ ದತ್ತ ಕೃಷ್ಣ ಪ್ರಯಾಣ ಬೆಳೆಸಿದ್ದಾರೆ.

ಇದ್ದಕ್ಕೂ ಮೊದಲು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಸ್ನೇಹಮಯಿ ಕೃಷ್ಣ ಮಾತನಾಡಿದ್ದು, ಇಂದು ಧಾರವಾಡ ವಿಭಾಗೀಯ ಪೀಠದಲ್ಲಿ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇದೆ. ಸಿಎಂ ಅವರು ಮುಡಾ ಪ್ರಕರಣದ ವಿಚಾರದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಸರ್ಕಾರ ಅವರದ್ದೇ ಇರುವುದರಿಂದ ಲೋಕಾಯುಕ್ತದ ಮೇಲೆಯೂ ಪ್ರಭಾವ ಬೀರಲಿದೆ. ಹೀಗಾಗಿ ಈ‌ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಸಿಬಿಐನಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಕೆಲವೇ ಕ್ಷಣಗಳಲ್ಲಿ ಧಾರವಾಡ ಹೈಕೋರ್ಟ್ ಗೆ ತೆರಳಲಿದ್ದೇನೆ. ಸಿಬಿಐ ತನಿಖೆಯಿಂದಾಗಿ ಸೂಕ್ತ ನ್ಯಾಯ ಸಿಗುವ ಭರವಸೆ ಇದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕು. ನೈತಿಕತೆ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 10:02 am

Cinque Terre

47.45 K

Cinque Terre

2

ಸಂಬಂಧಿತ ಸುದ್ದಿ