ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿವೇಕಾನಂದರ ಆದರ್ಶಗಳಿಂದ ಪ್ರಭಾವಿತರಾಗಿ - ನ್ಯಾಯಾಧೀಶ ಅಬ್ದುಲ್ ಖಾದರ್

ಕುಂದಗೋಳ : ಸ್ವಾಮಿ ವಿವೇಕಾನಂದರ ಜಯಂತೋತ್ಸವ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಗೋಳ ಹಾಗೂ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯ ಸಂಶಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಜರುಗಿತು.

ಸಂಶಿ ಕೆ.ಎಲ್.ಇ.ಕಾಲೇಜು ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಜನತೆ ಈ ದೇಶದ ಅಮೂಲ್ಯ ಕೊಡುಗೆಗಳು ಏನು ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಅತಿಥಿಗಳಾದ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿ ವಕೀಲರ ಸಂಘದ ಅಧ್ಯಕ್ಷ, ಬಿ. ಪಿ.ಪಾಟೀಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಧೀಶರುಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎ.ಬಿ.ಉಪ್ಪಿನ ವಹಿಸಿದ್ದರು. ಸಭೆಯಲ್ಲಿ ಹಿರಿಯ ವಕೀಲರಾದ ಸಿ.ಎಂ. ಕಾಳೆ, ಅಶೋಕ ಶ್ರೀ ಕ್ಯಾರಕಟ್ಟಿ, ಎ.ಆರ್.ಕುಲಕರ್ಣಿ ಜಿ.ಬಿ. ಸೊರಟೂರ ಉಪಸ್ಥಿತರಿದ್ದು ಕಾಲೇಜು ಆವರಣದಲ್ಲಿ ಸಸಿ ನೆಟ್ಟರು.

ಕುಂದಗೋಳ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಗೀತಾ ಜಿ ಮತ್ತು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಎ. ಎಚ್. ಅಗಡಿ ವಕೀಲರು ಉಪನ್ಯಾಸ ನೀಡಿದರು. ಪ್ರಾಚಾರ್ಯ ಪ್ರೊ. ರಮೇಶ ಅತ್ತಿಗೇರಿ ಸ್ವಾಗತಿಸಿದರು. ಎಸ್. ಸಿ.ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

Edited By : Suman K
Kshetra Samachara

Kshetra Samachara

15/01/2025 12:29 pm

Cinque Terre

8.61 K

Cinque Terre

0

ಸಂಬಂಧಿತ ಸುದ್ದಿ